ದಕ್ಷಿಣ ಕನ್ನಡ

ನೇಣು ಬಿಗಿದುವ್ಯಕ್ತಿ ಆತ್ಮಹತ್ಯೆ

Published On :

ಮಣಿಪಾಲ: ಇಲ್ಲಿನ ಅಲೆವೂರು ಗ್ರಾಮದ ಪ್ರಗತಿನಗರ ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಶನಿವಾರ ರಾತ್ರಿ ನಡೆದಿದೆ. ಮೃತರು ಸುರೇಶ್ ನಾಯ್ಕ್ (45). ಅವರಿಗೆ ವಿಪರೀತ ಮದ್ಯಪಾನದ ಚಟ ಇತ್ತು. ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಶೌಚಾಲಯದ ಮಾಡಿಗೆ ಲುಂಗಿ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಪತ್ನಿ ಬೇಬಿ ಎಸ್. ನಾಯ್ಕ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ಹೆಬ್ರಿ: ಇಲ್ಲಿನ ಚಾರಾ ಗ್ರಾಮದ ಹಸಿಕೊಡ್ಲು ಎಂಬಲ್ಲಿ ಮಹಿಳೆಯೊಬ್ಬರು ಅನಾರೋಗ್ಯದ ಕಾರಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತರು ಉಷಾ. ಈಕೆಗೆ ಸುಮಾರು 5 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಮಾಡಿದರೂ ಗುಣಮುಖವಾಗದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹೆಬ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಮಹಿಳೆ ಸರ ಅಪಹರಣ
ಉಡುಪಿ: ಶಿರ್ವದ ಪಿಲಾರ್ ಗ್ರಾಮದ ಪೆರ್ನಾಲ್ ಎಂಬಲ್ಲಿ ಶನಿವಾರ ಸಂಜೆ ಕಳ್ಳರಿಬ್ಬರು ಮಹಿಳೆಯೊಬ್ಬರನ್ನು ಲೂಟಿ ಮಾಡಿದ ಘಟನೆ ನಡೆದಿದೆ. ಇಲ್ಲಿನ ಅಪ್ಪಿಹಿತ್ಲು ಹೌಸ್‌ನ ನಿವಾಸಿ ಅಂಜಲಿನ್ ಮೆನೇಜಸ್ (76) ಅವರು ಶನಿವಾರ ಸಂಜೆ 5.30ಕ್ಕೆ ಇಗರ್ಜಿಯಲ್ಲಿ ಪ್ರಾರ್ಥನೆ ಮುಗಿಸಿ ಹೋಗುವಾಗ ನಿರ್ಜನ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕುತ್ತಿಗೆಯಲ್ಲಿದ್ದ 20 ಸಾವಿರ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆಕೋರ ಆರೋಪಿಗಳ ಸೆರೆ
ಮಂಗಳೂರು: ಪಾವಂಜೆ ಬಳಿ ಲಾರಿ ತಡೆದು 2.7 ಲಕ್ಷ ದೋಚಿದ ಇಬ್ಬರು ದರೋಡೆಕೋರರನ್ನು ಪಣಂಬೂರು ಉಪವಿಭಾಗ ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಹೊನ್ನಾಳ ಸನಾಂ ಮಂಜಿಲ್ ನಿವಾಸಿ ಮಹಮ್ಮದ್ ತೌಫೀಕ್ (24), ಸುರತ್ಕಲ್ ಜನತಾ ಕಾಲೊನಿ ನಿವಾಸಿ ಮಹಮ್ಮದ್ ನಿಸಾರ್ (22) ಬಂಧಿತರು. ತೌಫೀಕ್ ಕೂಡಾ ಸುರತ್ಕಲ್ ಕಾನಕಟ್ಲದಲ್ಲಿ ನಿಸಾರ್ ಜತೆ ವಾಸವಿದ್ದ. ಮಾ.30ರಂದು ಮೀನಿನ ಲಾರಿ ತಡೆದು ಚಾಲಕ ಮೊಹಮ್ಮದ್ ಪೀರ್ ಸಾಹೇಬ್ ಅವರಿಗೆ ಹೊಡೆದು ಲಾರಿಯಲ್ಲಿದ್ದ ನಗದು ದರೋಡೆ ಮಾಡಿದ್ದರು. ಲಾರಿ ತಡೆ ಚಾಲಕನನ್ನು ದರೋಡೆ ಮಾಡಬೇಕು ಎಂಬ ಉದ್ದೇಶದಿಂದ ಡಿಸೇಲ್ ತೆಗೆಯುವ ನೆಪದಲ್ಲಿ ಚಾಲಕನನ್ನು ಇಳಿಸಿದ್ದರು. ಡಿಸೇಲ್ ತೆಗೆಯುವಾಗ ನಿಯಾಜ್ ಮತ್ತು ಸಾನು ಅಲ್ಲಿಗೆ ಬಂದು ತೌಫೀಕ್ ಮತ್ತು ನಿಸಾರ್‌ಗೆ ಹೊಡೆಯುವಂತೆ ನಾಟಕ ಮಾಡಿದರು. ಬಳಿಕ ಚಾಲಕನನ್ನು ದರೋಡೆ ಮಾಡಿದರು. ಎಟಿಎಂ ಕಾರ್ಡ್, ಪರ್ಸ್, ಡ್ರೈವಿಂಗ್ ಲೈಸೆನ್ಸ್ ಕೂಡಾ ಒಯ್ದಿದ್ದರು. ನಾಲ್ವರು ದರೋಡೆ ಸಂಚು ರೂಪಿಸಿದ್ದಾಗ ಆರೋಪಿಗಳು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ನಗದು, ಸೊತ್ತುಗಳನ್ನು  ವಶಕ್ಕೆ ತೆಗೆದುಕೊಳ್ಳಲಾಗಿದೆ. ಪಣಂಬೂರು ಉಪವಿಭಾಗ ಎಸಿಪಿ ರವಿಕುಮಾರ್, ಮೂಲ್ಕಿ ಠಾಣೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್, ಎಸ್‌ಐ ವಾಮನ ಸಾಲಿಯಾನ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.