ಕಾಂಗ್ರೆಸಿಗರಿಗೆ ಬ್ಲೂಫಿಲಂ ಇಷ್ಟ
ಮಂಗಳೂರು: 'ಬ್ಲೂಫಿಲಂ ಅಂದ್ರೆ ಕಾಂಗ್ರೆಸಿಗರಿಗೆ ಬಹಳ ಆಸೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮಂಗಳೂರಿನ ಬ್ಲೂಫಿಲಂ ನೋಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯರಾತ್ರಿ ಕಾರ್ಯಕರ್ತರ ಮನೆಗೆ ಹೋಗುತ್ತಾರೆ' ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ತಂದೆ ತಾಯಿ ಇಲ್ಲದ ಮಕ್ಕಳಂತೆ ಆಗಿದೆ. ಪೋಷಕರಂತಿರುವ ರಾಹುಲ್ ಖುಷಿ ಬಂದ ಹಾಗೆ ಮಾಡುತ್ತಿದ್ದಾರೆ. ಮಂಗಳೂರು ಕಾಂಗ್ರೆಸ್ನಲ್ಲಿ ಆಂತರಿಕ ಚುನಾವಣೆ ನಡೆಯಿತು. ಚರಿತ್ರೆಯಲ್ಲಿ ಮೊದಲ ಬಾರಿಗೆ ಈ ಚುನಾವಣೆ ನಡೆಯಲು ಮಂಗಳೂರಿನ ಕೋಳಿ ಸುಕ್ಕ, ಮಂಗಳೂರಿನ ಬ್ಲೂಫಿಲಂ ಕಾರಣ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
'ಪರಮೇಶ್ವರ್ ಬ್ಲೂಫಿಲಂ ನೋಡಿದ್ದು ಸಿಂಗಪುರದಲ್ಲಿ. ಮುಖ್ಯಂತ್ರಿ ಸಿದ್ದರಾಮಯ್ಯ ಮಧ್ಯರಾತ್ರಿ ಕಾರ್ಯಕರ್ತರ ಮನೆಗೆ ಏಕೆ ಹೋಗುತ್ತಾರೆ, ಕಾಲ ಬಂದಾಗ ಏಕೆ ಹೋಗುತ್ತಾರೆ ಎಂಬುದನ್ನು ಹೇಳುತ್ತೇನೆ. ಸದನದಲ್ಲಿ ಬ್ಲೂಫಿಲಂ ನೋಡಿಲ್ಲ ಎಂಬುದಕ್ಕೆ ಸದನ ಸಮಿತಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ. ಕಾಂಗ್ರೆಸಿಗರು ಸದನಕ್ಕೆ, ಕೋರ್ಟ್ಗೆ ಗೌರವ ನೀಡುವುದಿಲ್ಲವೇ? ಬ್ಲೂಫಿಲಂ ನೋಡುವ ಇವರಿಗೆ ನಮ್ಮ ಮೇಲೆ ಆರೋಪ ಮಾಡಲು ಯಾವ ಹಕ್ಕಿದೆ' ಎಂದರು.
ಭಜನೆ ಸಂಕಷ್ಟ: ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಧಾರ್ಮಿಕ ಕಾರ್ಯಕ್ರಮ ನಡೆಸುವುದೂ ಕಷ್ಟವಾಗಿದೆ. ಎಷ್ಟೋ ವರ್ಷಗಳಿಂದ ಕೃಷ್ಣಾಪುರದಲ್ಲಿ ನಡೆಯುತ್ತಿದ್ದ ಭಜನೆಗೆ ಅಡ್ಡಿ ಮಾಡಿದ್ದಾರೆ.
ತುಂಬೆ ವೆಂಟೆಡ್ ಡ್ಯಾಮ್ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಮಾತ್ರ ಹಣ ಬಿಡುಗಡೆ ಮಾಡಿದೆ. ಕಾಂಗ್ರೆಸ್ಸರ್ಕಾರ ಹೆಚ್ಚುವರಿ ಹಣವನ್ನು ಇನ್ನೂ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಪೆಟ್ರೋಲ್, ಡೀಸೇಲ್, ಗ್ಯಾಸ್ ಉತ್ಪಾದಿಸುವ ಎಂಆರ್ಪಿಎಲ್ ಮಂಗಳೂರಲ್ಲಿ ಇದ್ದರೂ ಸಾಗಾಟ ವೆಚ್ಚ ಎಂದು ಗ್ರಾಹಕರಿಗೆ 2 ಹೆಚ್ಚುವರಿ ವಿಧಿಸುತ್ತಿದೆ. ಕೊಚ್ಚಿನ್ ಕೇಂದ್ರದ ಮೂಲಕ ಮಂಗಳೂರಿಗೆ ಪೆಟ್ರೋಲ್ ಸರಬರಾಜು ಮಾಡುವುದಾಗಿ ಬಿಲ್ ಮಾಡಲಾಗುತ್ತಿದೆ. ಮಂಗಳೂರಲ್ಲಿಯೇ ಬಿಲ್ ಮಾಡಿದರೆ ಇಲ್ಲಿನ ಜನರಿಗೆ 5.52 ಕೋಟಿ ಹೊರೆ ಕಡಿಮೆಯಾಗಲಿದೆ. ಹೊರೆ ಕಡಿಮೆ ಮಾಡುವಂತೆ ಸಂಸದರು ಈ ಹಿಂದೆಯೇ ಮನವಿ ಮಾಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ದಿವಾಕರ ಸಾಮಾನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

