ದಕ್ಷಿಣ ಕನ್ನಡ

ಮಲೇರಿಯಾ ಜಾಗೃತಿ ಕರಪತ್ರ ಬಿಡುಗಡೆ

Published On :

ಮಂಗಳೂರು: ಸೆಂಟರ್ ಫಾರ್ ಇಂಟರ್ಗ್ರೇಟೆಡ್ ಲರ್ನಿಂಗ್ ಮತ್ತು ಮುಂಗಳೂರು ಮಹಾನಗರ ಪಾಲಿಕೆ ಜಂಟಿ ಆಶ್ರಯದಲ್ಲಿ ಮಲೇರಿಯಾ ತಡೆಗಟ್ಟುವ ಕಾರ್ಯಕ್ರಮಕ್ಕೆ ಕರಪತ್ರ ಬಿಡುಗಡೆ ಮಾಡುವ ಮೂಲಕ ಮೇಯರ್ ಮಹಾಬಲ ಮಾರ್ಲ ಚಾಲನೆ ನೀಡಿದರು.
ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜ್ ಇನ್ನಿತರ ಸಂಘ ಸಂಸ್ಥೆಗಳನ್ನು ಜಾಗೃತಿ ಅಭಿಯಾನದಲ್ಲಿ ತೊಡಗಿಸುತ್ತೇವೆ. ಮುಂದಿನ ವರ್ಷ ಶೇ.80 ಸಾಂಕ್ರಾಮಿಕ ಜ್ವರ ಕಡಿಮೆಯಾಗಿಸಲು ಪ್ರಯತ್ನ ಪಡುತ್ತೇವೆ ಎಂದುಮೇಯರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 300 ಜೀವಗಳನ್ನು ಬಲಿ ತೆಗೆದುಕೊಂಡಿರುವ ಕಾಯಿಲೆ. ಇದು ರಾಜ್ಯದಲ್ಲಿಯೇ ಅತಿ ಹೆಚ್ಚು. ಮಲೇರಿಯಾವನ್ನು ಸೋಲಿಸುವ ಸಮಯ ಬಂದಿದೆ. ಸಾರುವೆವೆವ  ಮಲೇರಿಯಾ ವಿರುದ್ಧ ಸಮರ ಎಂಬ ಶೀರ್ಷಿಕೆಯೊಂದಿಗೆ ಈ ಕಾರ್ಯಕ್ರಮದಲ್ಲಿ 50 ಶಾಲೆಗಳ 20 ಸಾವಿರ ಕ್ಕಿಂತ ಹೆಚ್ಚು ಮಕ್ಕಳ ಭಾಗವಹಿಸುವರು ಎಂದು ಕಾರ್ಯಕ್ರಮ ಸಂಯೋಜಕ ನಂದಗೋಪಾಲ್ ಹೇಳಿದರು. ಉಪನ್ಯಾಸ, ಪ್ರದರ್ಶನ, ಅಧ್ಯಾಪಕರ ತರಬೇತಿ, ಯಕ್ಷಗಾನ, ನಾಟಕ, ಚಿತ್ರಕಲೆ ಪ್ರದರ್ಶನ  ಒಳಗೊಂಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.