ದಕ್ಷಿಣ ಕನ್ನಡ

ಸಂಶಯಾಸ್ಪದವಾಗಿ ಓಡುತ್ತಿದ್ದಾಗ ಗುಂಡು ಹೊಡೆದರು: ಚಾಲಕ

Published On :

ವಿಶೇಷ ವರದಿ
ಮಂಗಳೂರು: ನಕ್ಸಲರು ಪ್ರಯಾಣಿಕರಿಂದ ಹಣ ದೋಚಿದ್ದಾರೆ ಎಂದು ಎಎನ್‌ಎಫ್‌ಗೆ ಮಾಹಿತಿ ಬಂದ ಸ್ವಲ್ಪ ಹೊತ್ತಿನ ಬಳಿಕ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ತನಿಕೋಡು ಚೆಕ್ ಪೋಸ್ಟ್‌ಗೆ ಬಂದಿದೆ. ಚೆಕ್ ಪೋಸ್ಟ್ ಬಳಿ ಮಾಮೂಲಿ ನೀಡಿ ಚೀಟಿ ಪಡೆಯಲು ಪಿಕಪ್‌ನಿಂದ ಇಳಿದು ಹೋದ ರಫೀಕ್ ಎಎನ್‌ಎಫ್ ಸಿಬ್ಬಂದಿಯನ್ನು ನೋಡಿ ಬೆದರಿ ಚೀಟಿ ಪಡೆಯದೆ, ನೇರವಾಗಿ ನಡೆದೇ ಚೆಕ್ ಪೋಸ್ಟ್ ದಾಟಿದ. ಇದನ್ನು ನೋಡಿ ಸರ್ಫ್ರಾಜ್ ಮತ್ತು ಚಾಲಕ ಪ್ರಮೋದ್ ರಾಂಗ್ ಸೈಡ್‌ನಿಂದ ಇಳಿದು ಓಡಿದ್ದಾರೆ.
ಇದನ್ನು ನೋಡಿದ ಎಎನ್‌ಎಫ್‌ನ ನವೀನ್ ನಾಯ್ಕ್‌ಗೆ ನಕ್ಸಲರೇ ದಾಳಿಗೆ ಬಂದಿದ್ದಾರೆ ಎಂಬ ಭಾವನೆ ಮೂಡಿದೆ. ಈ ವೇಳೆ ವಾಹನದ ಹಿಂಭಾಗದಲ್ಲಿದ್ದ ಕಬೀರ್, ಹೊರಕ್ಕೆ ಬೊಬ್ಬೆ ಹೊಡೆಯುತ್ತ ಓಡಲಾರಂಭಿಸದ ಆಗ ನವೀನ್ ನಾಯ್ಕ ಗುಂಡು ಹಾರಿಸಿದರು. ಸೆಮಿ ಅಟೋಮ್ಯಾಟಿಕ್ ಮೋಡ್‌ನಲ್ಲಿದ್ದ ರೈಫಲ್‌ನಿಂದ ಸಿಡಿದ ಎರಡು ಗುಂಡು ಬೆನ್ನಿಗೆ ತಾಗಿ ಎದೆಯಿಂದ ಹೊರ ಬಂದಿದೆ. ಇನ್ನೊಂದು ಕೈಗೆ ಹೊಡೆದಿದೆ....
ಇದು ಏ.19ರಂದು ಬೆಳಗ್ಗಿನ ಜಾವ 3.30ಕ್ಕೆ ತನಿಕೋಡು ಚಕ್‌ಪೋಸ್ಟ್ ಬಳಿ ನಡೆದ ಶೂಟೌಟ್‌ನ ಪ್ರತ್ಯಕ್ಷದರ್ಶಿ ದನ ಸಾಗಾಟ ವಾಹನ ಚಾಲಕ ಪ್ರಮೋದ್ ಪೂಜಾರಿ ಹೇಳಿಕೆ ಮತ್ತು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ ಸಿಐಡಿ ಮುಂದೆ ಎಎನ್‌ಎಫ್ ಸಿಬ್ಬಂದಿ ನವೀನ್ ನೀಡಿರುವ ಹೇಳಿಕೆಗಳಿಂದ ಘಟನೆ ಚಿತ್ರಣ ಹೊರಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.