ದಕ್ಷಿಣ ಕನ್ನಡ

ಕ್ಯಾನ್ಸರ್ ಪೀಡಿತ ವಿದ್ಯಾರ್ಥಿ ಚಿಕಿತ್ಸೆಗೆ ಸಹಾಯ ಮಾಡುವಿರಾ?

Published On :

ಶಿರ್ವ: ಇಲ್ಲಿನ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಆಕಾಶ್ ಆಚಾರ್ಯ (8) ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಪ್ರಸ್ತುತ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಚಿಕಿತ್ಸೆಗಾಗಿ ಈ ಬಡ ಕುಟುಂಬ ಧನಸಹಾಯ ಕೋರಿದೆ.
ಆಸ್ಪತ್ರೆಯ ತಜ್ಞವೈದ್ಯರ ಮಾಹಿತಿಯಂತೆ ಬಾಲಕನ ಚಿಕಿತ್ಸೆಗೆ ರಿಯಾಯಿತಿಯೊಂದಿಗೆ ಕನಿಷ್ಠ ರು. 5 ಲಕ್ಷ ಖರ್ಚು ಬರಲಿದೆ. ಬಂಟಕಲ್ಲು ಪೊದಮಲೆಯಲ್ಲಿ ಸಣ್ಣ ಮನೆಯಲ್ಲಿ ವಾಸವಾಗಿರುವ ತೀರ ಬಡ ಕುಟುಂಬದ ಶಾಂತಾ ಆಚಾರ್ಯ, ಉಮೇಶ ಆಚಾರ್ಯ ದಂಪತಿಯ ಇಬ್ಬರು ಮಕ್ಕಳಲ್ಲಿ ಆಕಾಶ್ ಹಿರಿಯ ಮಗ. ದುಡಿದು ಕುಟುಂಬ ಭಾರ ಹೊರಬೇಕಾಗಿದ್ದ ಉಮೇಶ ಆಚಾರ್ಯರ ಆರೋಗ್ಯ ಕೂಡ ಚೆನ್ನಾಗಿಲ್ಲ. ಆದ್ದರಿಂದ ಕುಟುಂಬದ ಜವಾಬ್ದಾರಿಯನ್ನು ಕೂಲಿ ಕಾರ್ಮಿಕಳಾದ ಶಾಂತಾ  ಹೊತ್ತುಕೊಂಡಿದ್ದಾರೆ. ಮಗುವಿನ ಚಿಕಿತ್ಸೆಗಾಗಿ ಈಗಾಗಲೇ ಸಾವಿರಾರು ರುಪಾಯಿ ಖರ್ಚಾಗಿದ್ದು, ಶಾಲಾ ಶಿಕ್ಷಕರು, ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರು ಅಲ್ಪಸ್ವಲ್ಪ ಸಹಾಯಧನ ನೀಡಿದ್ದಾರೆ. ಮಗನ ಚಿಕಿತ್ಸೆಗೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುವ ಸ್ಥಿತಿಯಲ್ಲಿಲ್ಲದ ಈ ಕುಟುಂಬ ಕಣ್ಣೀರಿಡುತ್ತಿದೆ. ಅನಿವಾರ್ಯವಾಗಿ ಸಹೃದಯಿಗಳ, ಸಂಘಟನೆಗಳ ಸಹಾಯಹಸ್ತವನ್ನು ನಿರೀಕ್ಷಿಸುತ್ತಿದೆ. ದಾನಿಗಳು ತಮ್ಮ ಆರ್ಥಿಕ ಸಹಾಯವನ್ನು ಬಂಟಕಲ್ಲು ಕರ್ನಾಟಕ ಬ್ಯಾಂಕ್  ಉಳಿತಾಯ ಖಾತೆ ನಂ. 0822500100558101 ಗೆ ಜಮಾ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.