ದಕ್ಷಿಣ ಕನ್ನಡ

ಮಂಗಳೂರು ಪ್ರೀತಿಸಿ, ರಕ್ಷಿಸಲು ಸಹಿ ಬೆಂಬಲ

Published On :

ಮಂಗಳೂರು: ಅದ್ವೈತ ಹುಂಡೈ ಸಹಕಾರದಲ್ಲಿ 92.7 ಬಿಗ್ ಎಫ್‌ಎಂ ಮಂಗಳೂರು ಆಯೋಜಿಸಿದ ಬಿಗ್ ಎಂಐಸಿ ಕಾರ್ಯಕ್ರಮ ಸಮಾರೋಪ ನಗರದ ಭರತ್ ಮಾಲ್‌ನಲ್ಲಿ ನಡೆಯಿತು. 'ಮಂಗಳೂರನ್ನು ಪ್ರೀತಿಸಿ ಮತ್ತು ರಕ್ಷಿಸಿ' ಧ್ಯೇಯ ವಾಕ್ಯಕ್ಕೆ ಸಿನಿಮಾ ನಟರು, ನಾಗರಿಕರು ಸಹಿ ಹಾಕಿ ಬೆಂಬಲ ವ್ಯಕ್ತಪಡಿಸಿದರು.
ಕರಾವಳಿಯ ಜನರ ಅವಶ್ಯಕತೆಗೆ ಸ್ಪಂದಿಸುವ ಸಲುವಾಗಿ ಬಿಗ್ ಎಫ್‌ಎಂ ತಂಡ ನಗರದ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಮಂಗಳೂರಿನ ಅಭಿವೃದ್ಧಿಗೆ ಸಲಹೆ, ಸೂಚನೆ ಪಡೆಯಿತು. ಇದನ್ನು ಶೀಘ್ರವೇ ಜಿಲ್ಲಾಧಿಕಾರಿಗೆ ಸಲ್ಲಿಸಲಿದೆ. ಒರಿಯರ್ದೊರಿ ಅಸಲ್ ಚಿತ್ರದ ನಟ ಲಿಖಿತ್ ಶೆಟ್ಟಿ ಆಗಮಿಸಿ, ಸ್ವಚ್ಛ ಮತ್ತು ಹಸಿರು ನಗರವಾಗಿ ಮಂಗಳೂರನ್ನು ಉಳಿಸುವಂತೆ ಕಳಕಳಿ ವ್ಯಕ್ತಪಡಿಸಿದರು. ನಟಿ ಯಜ್ಞ ಶೆಟ್ಟಿ ಮಾತನಾಡಿ, ನಗರದ ಅಭಿವೃದ್ಧಿಗೆ ಜನತೆಯ ಸಹಕಾರ ಬಯಸಿದರು. ಬಿಗ್ ಎಫ್‌ಎಂ ಆರ್‌ಜೆ ಎರೋಲ್, ವರ್ಷಾ, ಆಸ್ಟನ್ ಸಿಕ್ವೇರಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.