ದಕ್ಷಿಣ ಕನ್ನಡ

ಒಡಿಶಾ ಗೊಟಿಪುವಾ ನೃತ್ಯ ಪ್ರದರ್ಶನ

Published On :

ಸುಳ್ಯ: ಒಡಿಶಾದ ಕೊನಾರ್ಕ್ ನೃತ್ಯ ಮಂಟಪದ ಗೊಟ್ಟಿಪುವ್ವಾ ನೃತ್ಯ ತಂಡ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ  ಸ್ಪಿಕ್ ಮೆಕೆ ಸಹಯೋಗದಲ್ಲಿ ಪ್ರದರ್ಶನ ನೀಡಿತು.
ಕಾರ್ಯಕ್ರಮವನ್ನು ಎಸ್‌ಬಿಎಂ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಈ ತಂಡದಲ್ಲಿದ್ದ ಒಂಬತ್ತು ನೃತ್ಯ ವಿದ್ಯಾರ್ಥಿಗಳು ವಿವಿಧ ಬಗೆಯ ಶಿಲ್ಪಕಲಾ ಭಂಗಿಗಳನ್ನು ಯೋಗಾಸನ ಸಹಿತ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಕೇವಲ ದೇಶೀಯ ವಾದ್ಯಗಳಾದ ಹಾರ್ಮೋನಿಯಮ್, ಪಕ್ವಾಜ್ ವಯಲಿನ್, ಮೃದಂಗ ಮತ್ತು ತಾಳಗಳನ್ನು ಉಪಯೋಗಿಸಿದ್ದಾರೆ.
ಹಾಡುಗಾರಿಕೆಯಲ್ಲಿ ಗುರು ಜೈಕೃಷ್ಣ ನಾಯಕ್, ವಯಲಿನ್‌ನಲ್ಲಿ ಸಂಜಯ್ ಕುಮಾರ್ ಪ್ರಧಾನ್, ಮೃದಂಗದಲ್ಲಿ ಅಲೋಕ್ ರಂಜನ್ ದಾಸ್ ಹಾಗೂ ಮೊಂಜಿರಾದಲ್ಲಿ ಕುಮಾರ್ ಧಿರೇನ್ ಸಹಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.