ಡಾ. ಸಂಜೀವನಾಥ ಐಕಳರಿಗೆ ಅಂತಿಮ ನಮನ
ಮೂಲ್ಕಿ: ಗುರುವಾರ ನಿಧನ ಹೊಂದಿದ ಮಾಜಿ ಶಾಸಕ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ಡಾ. ಸಂಜೀವನಾಥ ಐಕಳರ ಅಂತ್ಯಕ್ರಿಯೆ ಶುಕ್ರವಾರ ಅವರ ಹುಟ್ಟೂರಾದ ಐಕಳ ಬಾವಾದಲ್ಲಿ ಜರಗಿತು. ಮೂಲ್ಕಿಯ ಕಾರ್ನಾಡಿನ ಮರ್ಕುಂಜ ಮನೆಗೆ ಕೇಂದ್ರ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಭೇಟಿ ನೀಡಿ ಡಾ ಸಂಜೀವ ನಾಥ ಐಕಳರ ಅಂತಿಮ ಯಾತ್ರೆಯ ಮೆರವಣೆಗೆಯ ಸಂದರ್ಭದಲ್ಲಿ ಅವರ ಮೃತ ದೇಹಕ್ಕೆ ಹೆಗಲು ನೀಡುವ ಮೂಲಕ ಗೌರವ ಸಲ್ಲಿಸಿದರು. ಕಾರ್ನಾಡಿನಿಂದ ಮೂಲ್ಕಿ, ಕೆಂಚನಕೆರೆ ಮೂಲಕ ಅಂತಿಮ ಯಾತ್ರೆಯು ಪುನರೂರಿಗೆ ಬಂದ ಸಂದರ್ಭದಲ್ಲಿ ಅವರು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ನಿರ್ಮಿಸಿದ ಪುನರೂರಿನ ಭಾರತಾ ಮಾತಾ ಶಾಲೆಯಲ್ಲಿ ಅವರ ಮೃತ ದೇಹವನ್ನು ಇರಿಸಲಾಯಿತು. ಶಾಲೆಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು. ಶಾಲೆಗೆ ಶುಕ್ರವಾರ ರಜೆ ಸಾರಲಾಗಿತ್ತು. ಬಳಿಕ ಕಿನ್ನಿಗೋಳಿ, ಮೂರುಕಾವೇರಿ ಮೂಲಕ ಅಂತ ಹುಟ್ಟೂರಾದ ಐಕಳ ಬಾವಾಕ್ಕೆ ಮೆರವಣೆಗೆ ಬಂದು ಐಕಳ ಬಾವಾದ ಅವರ ಮನೆಯ ತೋಟದಲ್ಲಿ ಅಂತ್ಯಕ್ರಿಯೆ ಜರಗಿತು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಐಕಳಬಾವಾ ದೇವಿಪ್ರಸಾದ್ ಶೆಟ್ಟಿ, ಚಿತ್ತರಂಜನ್, ಚಿತ್ತರಂಜನ್ ಭಂಡಾರಿ, ಮೂಲ್ಕಿ ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

