ಉಳ್ಳಾಲ: ಕೋಮುಗಲಭೆ ರೂವಾರಿಗಳ ಸೆರೆ
ಮಂಗಳೂರು: ಉಳ್ಳಾಲ ಪರಿಸರದಲ್ಲಿ ಗಲಭೆಗೆ ಕಾರಣರಾದ ಇಬ್ಬರು ರೌಡಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಕೋಟೆಪುರ ಅಕ್ಷರ್ ಮಂಝಿಲ್ ನಿವಾಸಿ ಮಹಮ್ಮದ್ ಶಬೀರ್ ಯಾನೆ ಮಹಮ್ಮದ್ ಕಬೀರ್ ಯಾನೆ ಚೆಬ್ಬಿ, ಬರಾಕ ಫ್ಯಾಕ್ಟರಿ ಬಳಿಯ ಆಯೆಶಾ ಮಂಝಿಲ್ ನಿವಾಸಿ ಅಬ್ದುಲ್ ಮನ್ನಾನ್ ಯಾನೆ ಮುನಾಫ್ ಬಂಧಿತರು. ಕಬೀರ್ ಫಿಶ್ ಆಯಿಲ್ ಮಿಲ್ ಸೆಕ್ಯುರಿಟಿ ಗಾರ್ಡ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ. ಮನ್ನಾನ್ ವಿರುದ್ಧವೂ ಅನೇಕ ಕ್ರಿಮಿನಲ್ ಪ್ರಕರಣಗಳಿವೆ.
ಇವರು ಮೊಗವೀರಪಟ್ಣದ ಪರಿಸರದ ಮಹಿಳೆಯರ ಮನೆಗಳಿಗೆ ನುಗ್ಗಿ ಕಿರುಕುಳ ನೀಡುತ್ತಿದ್ದರು.
ಫೆ.4ರಂದು ರಾತ್ರಿ ಮೀನುಗಾರ ಮಹಿಳೆಯರ ಮನೆಗೆ ನುಗ್ಗಿ ಕಿರುಕುಳ ನೀಡಿದ ಬಳಿಕ ಕೋಮುಗಲಭೆ ನಡೆದಿತ್ತು. ಫೆ.4ರಂದೇ ಇವರಿಬ್ಬರು ಊರು ಬಿಟ್ಟು ಪರಾರಿಯಾಗಿದ್ದರು.
ಉಳ್ಳಾಲ ಪೊಲೀಸರು ಇಬ್ಬರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಕೋಮು ಗಲಭೆಗೆ ಸಂಚು ಹೂಡಿರುವ ಬಗ್ಗೆ ಬಾಯಿ ಬಿಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಹಿರಿಯಡ್ಕ: ಇಲ್ಲಿನ ಅಂಜಾರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತರು ಆನಂದ ಮೈಂದನ್ (56), ಅವರಿಗೆ ವಿಪರೀತ ಶರಾಬು ಕುಡಿತದ ಚಟವಿದ್ದು, ಇದರಿಂದ ಸಂಸಾರ ನಿರ್ವಹಣೆ ಮಾಡುವ ವಿಚಾರದಲ್ಲಿ ಮನನೊಂದು ತಮ್ಮ ವಾಸ್ತವ್ಯದ ಮನೆ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಕೇಸು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

