ದಕ್ಷಿಣ ಕನ್ನಡ

ಸುಳ್ಯ: ನಮೋ ಬ್ರಿಗೇಡ್ ಝೇಂಕಾರ್ ರ್ಯಾಲಿ

Published On :

ಸುಳ್ಯ: ಗುಜರಾತ್ ಮಾದರಿ ಅಭಿವೃದ್ಧಿಯನ್ನು ಇಡಿ ದೇಶವೇ ಅನುಭವಿಸಲಿದೆ. ಅದಕ್ಕಾಗಿ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿದರೆ ಮಾತ್ರ ಅದು ಸಾಧ್ಯ. ಅಲ್ಲದೆ ಈ ದೇಶಕ್ಕೆ ಜಗದ್ಗುರು ಸ್ಥಾನ ಲಭಿಸುತ್ತದೆ ಎಂದು ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಭಾನುವಾರ ನಮೋ ಬ್ರಿಗೇಡ್ ಸುಳ್ಯದಲ್ಲಿ ಆಯೋಜಿಸಿದ ಝೇಂಕಾರ್ ರ್ಯಾಲಿ ಮತ್ತು ನಮೋ ಸಮಾವೇಶದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಕಾಂಗ್ರೆಸ್ ಇಷ್ಟು ವರ್ಷ ಆಡಳಿತ ನಡೆಸಿದ್ದರೂ ಅಭಿವೃದ್ಧಿ ಏನೂ ಇಲ್ಲ. ಕೇವಲ ಹಗರಣಗಳನ್ನೇ ಮಾಡಿದೆ. ಅವರಿಂದ ಈ ದೇಶಕ್ಕೆ ಮುಕ್ತಿ ದೊರಕಬೇಕು. ಅ ಮೂಲಕ ದೇಶದ ಸಮಗ್ರ ಅಭಿವೃದ್ಧಿಯ ಕನಸುಗಾರ ಮೋದಿಗೆ ಅವಕಾಶ ನೀಡಬೇಕು ಎಂದು ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್ ಸಂಚಾಲಕ ಲೋಕೇಶ್ ಕರೆಮೂಲೆ, ಸುಂದರ ಸರಳಾಯ, ಡಾ.ಸೌಮ್ಯ ಅಡ್ಡಂತಡ್ಕ, ಮೋಹನ್‌ರಾಮ್ ಸುಳ್ಳಿ, ಲಿಂಗಪ್ಪ ಗೌಡ ಇದ್ದರು. ಚಂದ್ರಶೇಖರ ಕೇರ್ಪಳ ವಂದಿಸಿದರು. ವಿಖ್ಯಾತ್ ನಿರೂಪಿಸಿದರು.
ಸಮಾವೇಶಕ್ಕೆ ಮುನ್ನ ಸಾವಿರಾರು ನಮೋ ಬ್ರಿಗೇಡ್ ಕಾರ್ಯಕರ್ತರು ನಗರದ ಜ್ಯೋತಿ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ನಂತರ ದೇವಸ್ಥಾನ ಎದುರು ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ಶಾಸಕ ಎಸ್.ಅಂಗಾರ, ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಜಿ.ಪಂ. ಸದಸ್ಯ ನವೀನ್ ಕುಮಾರ್ ಮೇನಾಲ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.