ದಕ್ಷಿಣ ಕನ್ನಡ

ನರ್ಸಿಂಗ್ ವಿದ್ಯಾರ್ಥಿ ಮೃತದೇಹ ಗುಜರಾತ್‌ಗೆ

Published On :

ಮೂಲ್ಕಿ: ಇಲ್ಲಿನ ಕೊಳಚಿಕಂಬಳದ ಸಮೀಪ ಸಮುದ್ರದ ಅಳಿವೆ ಬಾಗಿಲಿನಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿ ನೀರುಪಾಲಾಗಿ ಮೃತಪಟ್ಟ ವಿದ್ಯಾರ್ಥಿ ಜಿಗ್ನೇಶ್‌ನ ಮೃತದೇಹವನ್ನು ಗುಜಾರಾತಿಗೆ ಕೊಂಡೊಯ್ಯಲಾಯಿತು. ಭಾನುವಾರ ಅಳಿವೆ ಬಾಗಿಲಿಗೆ ಈಜಲು ಹೋದ ಮೂಲ್ಕಿ ಸೇಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜಿನ ಪ್ರಥಮ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿ, ಗುಜರಾತ್ ಮೂಲದ ಜಿಗ್ನೇಶ್ ಕುಲವಂಶ್ ಬಾಯಿ ಮನೆಯವರು ಮಂಗಳವಾರ ಮೂಲ್ಕಿಗೆ ಆಗಮಿಸಿ, ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಿಂದ ಶವ ಪಡೆದು ಹಿಂತಿರುಗಿದರು. ಜಿಗ್ನೇಶ್‌ನ ಶವ ಮೂಲ್ಕಿಗೆ ಆಗಮಿಸಿದ ಸಂದರ್ಭ ಮೂಲ್ಕಿಯ ಸೇಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯ, ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು.


ಕಟ್ಟಡದಿಂದ ಬಿದ್ದು ಗಾಯ
ಮೂಲ್ಕಿ: ಹಳೆಯಂಗಡಿಯ ಬಸ್ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಬಹು ಮಹಡಿಯ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಮಹಡಿಯ ಮೇಲಿನಿಂದ ಕೆಲಸ ಮಾಡುತ್ತಿದ್ದ ಬಿಜಾಪುರ ಮೂಲದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.