ದಕ್ಷಿಣ ಕನ್ನಡ

ಗುಂಡೂರಿ: ಜನಜನನೀ ಸಮ್ಮೇಳನ ಸಂಪನ್ನ

Published On :

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ 1,836 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸುಮಾರು ರು. 5 ಕೋಟಿ ನೆರವು ನೀಡಲಾಗಿದ್ದು, ಈ ಮೂಲಕ ಗೋವಿನ ಸಾಕಾಣಿಕೆಗೆ ಉತ್ತೇಜನ ನೀಡಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಗುಂಡೂರಿ ಕಾವೇರಮ್ಮ ಅಮೃತಧಾರಾ ಗೋಶಾಲೆಯಲ್ಲಿ ಜನಜನನೀ ಗೋವಿನ ಉತ್ಸವ ಗೋ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋವಿನ ಬಗ್ಗೆ ಗೌರವ ಮೂಡಿಸಬೇಕಾದ್ದು ನಮ್ಮ ಕರ್ತವ್ಯ. ಗೋ ಸಂಪತ್ತು ಇಲ್ಲದೆ ಮನುಷ್ಯನ ಬದುಕು ಸಾಧ್ಯವಿಲ್ಲ ಎಂದರು.
 ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿ, ನಾವು ಬದುಕಬೇಕು.  ಗೋವು ತನ್ನ ಆಹಾರದ ದೋಷಗಳನ್ನು ತನ್ನ ಮಾಂಸಕ್ಕೆ ಅರ್ಪಿಸಿಕೊಂಡು ಉತ್ತಮ ಗುಣವನ್ನು ತನ್ನ ಉತ್ಪನ್ನದ ಮೂಲಕ ಮನಗೆ ನೀಡುತ್ತದೆ. ಹಾಗಾಗಿ ಗೋ ಮಾಂಸ ಭಕ್ಷಣೆ ರೋಗಕ್ಕೆ ಆಹ್ವಾನ ನೀಡಿದಂತೆ. ಗೋ ಶಾಲೆಗಳು ಸಮಾಜದ ಸ್ವಾಸ್ಥ್ಯದ ಲಕ್ಷಣವಲ್ಲ. ಮನೆಮನೆಯಲ್ಲಿ ಗೋವು ಸಾಕಾವುದೇ ಸ್ವಾಸ್ಥ್ಯದ ಲಕ್ಷಣ ಎಂದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಸಮ್ಮೇಳನ ಸಮಿತಿ ಅಧ್ಯಕ್ಷ ಕಾಂತಾಜೆ ಈಶ್ವರ ಭಟ್, ಕ್ಯಾಂಪ್ಕೂ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಇದ್ದರು.
70 ಹರೆಯದಲ್ಲೂ ಗೋ ಸಾಕಾಣಿಕೆ ನಡೆಸುತ್ತಿರುವ ಕೊಕ್ಕಡ ಪಟ್ಟೂರು ನಿವಾಸಿ ಪಾರ್ವತಿಯಮ್ಮ ಅವರನ್ನು ಸ್ವಾಮೀಜಿ ಗೌರವಿಸಿದರು.
ಹವ್ಯಕ ಸಮಿತಿ ಮಂಡಲ ಅಧ್ಯಕ್ಷ ಬಾಲ್ಯ ಶಂಕರ ಭಟ್ ಸ್ವಾಗತಿಸಿದರು. ಉದಯಶಂಕರ ಭಟ್ ಅರಸಿನಮಕ್ಕಿ ವಂದಿಸಿದರು.
 ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಅಗರ್ತ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.