ದಕ್ಷಿಣ ಕನ್ನಡ

ಅಡಕೆ ನಿಷೇಧ: ಸಚಿವಗೆ ವರ್ಮುಡಿ ವರದಿ ಸಲ್ಲಿಕೆ

Published On :

ಮಂಗಳೂರು: ಗುಟ್ಕಾ ಮತ್ತು ಅಡಕೆ ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಹೂಡಲಾದ ದಾವೆ ಮುಂದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಈಗಾಗಲೇ ಸಲ್ಲಿಸಿದ ವರದಿಗೆ ಅಡಕೆ ಬೆಳೆಯುವ ರಾಜ್ಯ ಸರ್ಕಾರಗಳಿಗೆ ಅಫಿದಾವಿತ್ ಸಲ್ಲಿಸಲು ಅವಕಾಶ ಲಭಿಸಿದಂತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪುತ್ತೂರು ವಿವೇಕಾನಂದ ಕಾಲೇಜು ಉಪನ್ಯಾಸಕ, ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಭಾನುವಾರ ಆರೋಗ್ಯ ಸಚಿವ ಯು.ಟಿ. ಖಾದರ್‌ಗೆ 300 ಪುಟಗಳ ವರದಿ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಫೆ. 13 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಕರೆಯಲಾದ ಸಭೆಯಲ್ಲಿ ಅಡಕೆ ಬೆಳೆಯ ನಿಷೇಧದ ಬಗ್ಗೆ ಸರ್ಕಾರ ನಿಲುವನ್ನು ಸಮಗ್ರ ರೀತಿಯಲ್ಲಿ ಸಿದ್ಧಪಡಿಸಲು ಮತ್ತು ಈ ವಿಚಾರದ ಸಾಧಕಭಾದಕಗಳ ಬಗ್ಗೆ ಚರ್ಚಿಸಲಾಗಿತ್ತು.
ಸಭೆಗೆ ವಿಷಯತಜ್ಞರಾಗಿ ಡಾ. ವಿಘ್ನೇಶ್ವರ ವರ್ಮುಡಿ ತೆರಳಿದ್ದರು. ಅಂತಿಮವಾಗಿ ವರ್ಮುಡಿ ಅವರಲ್ಲಿ ಈ ಬಗ್ಗೆ ಲಭ್ಯ ಮಾಹಿತಿಗಳ ಪೂರೈಕೆಗೆ ಅಪರ ಮುಖ್ಯಕಾರ್ಯದರ್ಶಿ ಕೋರಿದ್ದರು. ಇದರಂತೆ ಡಾ. ಮರ್ಮುಡಿ ಫೆ. 19 ರಂದು ಸುಮಾರು 300 ಪುಟಗಳನ್ನೊಳಗೊಂಡ 'ಅರೆಕನಟ್ ವಿ ಮೆಡಿಸಿನಲ್ ಪ್ಲಾಂಟ್ ಆಫ್ ಇಂಡಿಯಾ' ಎಂಬ ವರದಿಯನ್ನು ಸರ್ಕಾರ ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸಲ್ಲಿಸಿದೆ.
ವರದಿಯಲ್ಲಿ ಅಡಕವಾಗಿರುವ ಅಂಶಗಳು: ಅಡಕೆ ಒಂದು ಔಷಧೀಯ ಸಸ್ಯ. ಅಡಕೆಯಲ್ಲಿ ಸಾಂಪ್ರಾದಾಯಿಕ ಹಾಗೂ ವೈಜ್ಞಾನಿಕ ಸಿದ್ಧಾಂತಗಳಿಗುಣವಾಗಿರುವ ಔಷಧೀಯ ಗುಣಗಳು. ಅಡಕೆಯಲ್ಲಿರುವ ಆರೋಗ್ಯಕರ ಅಂಶಗಳು. ಭಾರತ, ಕರ್ನಾಟಕ ಮತ್ತು ರಾಜ್ಯದ ಜಿಲ್ಲೆಗಳಲ್ಲಿ ಅಡಕೆ ಬೆಳೆಯ ಮಹತ್ವ. ಅಡಕೆ ಕ್ಯಾನ್ಸರ್‌ಕಾರಕ ಅಲ್ಲವೆಂಬುದಕ್ಕೆ ಪೂರಕ ಮಾಹಿತಿ. ಕ್ಯಾನ್ಸರಿಗೆ ಕಾರಣವಾಗಬಲ್ಲ ಹಾನಿಕಾರ ಉತ್ಪನ್ನ. ಅಡಕೆ ಮೇಲೆ ನಿಷೇಧ ಹೇರಿದ್ದಲ್ಲಿ ಆಗಬಹುದಾದ ದುಷ್ಪರಿಣಾಮಗಳು. ಈ ಎಲ್ಲ ವಿಚಾರಗಳಿಗೆ ಸಂಬಂಧಪಟ್ಟಂತೆ ಇಲ್ಲಿತನಕ ಆದ ವೈಜ್ಞಾನಿಕ ಅಧ್ಯಯನಗಳ ದಾಖಲೆಗಳನ್ನು ಈ ವರದಿಯಲ್ಲಿ ಸಲ್ಲಿಸಲಾಗಿದ್ದು, ಇವುಗಳನ್ನು ಕರ್ನಾಟಕ ಸರ್ಕಾರ ತಾನು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಿರುವ ಅಫಿದಾವಿತ್‌ನಲ್ಲಿ ಅಳವಡಿಸಿಕೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.