ಮೈಸ್: 25 ವರ್ಷಗಳ ಸಾಧನೆ ಹೆಜ್ಜೆ
ಮಂಗಳೂರು: ಮಣಿಪಾಲ ಇನ್ಸ್ಟಿಟ್ಯೂಟ್ ಆಪ್ ಕಂಪ್ಯೂಟರ್ ಎಜುಕೇಶನ್ (ಮೈಸ್) ಸಂಸ್ಥೆ ಎರಡೂವರೆ ದಶಕಗಳಿಂದ ಸುತ್ತಮುತ್ತಲಿನ ಪರಿಸರದಲ್ಲಿ ಮೌಲ್ಯಾಧಾರಿತ ಕಂಪ್ಯೂಟರ್ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. 1989ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯ 450 ಉಪ ಶಾಖೆಗಳು ದೇಶ-ವಿದೇಶಗಳಲ್ಲಿ ಕಾರ್ಯನಿರತವಾಗಿವೆ. ಕರ್ನಾಟಕ-ಗೋವಾ ಒಳಗೊಂಡಂತೆ 7 ಶಾಖೆಗಳನ್ನು ಹೊಂದಿದೆ. ಪ್ರಸ್ತುತ ಸುಮಾರು 30 ಸಾವಿರ ವಿದ್ಯಾರ್ಥಿಗಳು ಮೈಸ್ನ ವಿವಿಧ ಶಾಖೆಗಳಲ್ಲಿ ಅಭ್ಯಾಸ ನಿರತರಾಗಿದ್ದಾರೆ.
ಸಂಸ್ಥೆ ಸಾಫ್ಟ್ವೇರ್ ಉದ್ಯಮದ ವರ್ತಮಾನದ ಟ್ರೆಂಡ್ಗಳ ಆಧಾರದಲ್ಲಿ ತರಬೇತಿ ವಿನ್ಯಾಸಗೊಳಿಸಿದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರು, ಅಧಿಕಾರಿಗಳು, ನಿವೃತ್ತರು, ಗೃಹಿಣಿಯರಿಗೆ ಅನುಕೂಲವಾಗುವಂತೆ ಸರಳ ತರಗತಿಗಳನ್ನು ಆಯೋಜಿಸಲಾಗುವುದು. ಕಂಪ್ಯೂಟರ್ ಶಿಕ್ಷಣದ ಹೊರತಾಗಿ 2005ರಿಂದ ಐಐಟಿ ತರಬೇತಿ ಪ್ರಾರಂಭಗೊಂಡು ಉಡುಪಿಯ ಸಂಸ್ಥೆಯಲ್ಲಿ ತರಬೇತಿ ಪಡೆದು ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ವಿಯಾದ 238 ವಿದ್ಯಾರ್ಥಿಗಳಲ್ಲಿ 104 ವಿದ್ಯಾರ್ಥಿಗಳು ದೇಶದ ಪ್ರಮುಖ ಎಂಜಿನಿಯರಿಂಗ್ ಕಾಲೇಜ್ಗಳಲ್ಲಿ ಪ್ರವೇಶ ಪಡೆದಿದ್ದಾರೆ. ಉಡುಪಿ, ಮಂಗಳೂರು ಹಾಗು ಗೋವಾ ಸಂಸ್ಥೆಗಳಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ತರಬೇತಿಯನ್ನು ಕಳೆದ 9 ವರ್ಷಗಳಿಂದ ಆಯೋಜಿಸುತ್ತಿದೆ.
ಮುಕ್ತ ವಿವಿ ತರಬೇತಿ ಕೇಂದ್ರ: ಸಂಸ್ಥೆ ಸುಮಾರು 11 ವರ್ಷಗಳಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದ ತರಬೇತಿ ಕೇಂದ್ರವಾಗಿದ್ದು, ಸುಮಾರು 1600 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

