ದಕ್ಷಿಣ ಕನ್ನಡ

ತಂಡಗಳ ಹೊಡೆದಾಟ: ಮೂರು ಪ್ರಕರಣ ದಾಖಲು

Published On :

ಬೆಳ್ತಂಗಡಿ: ಚ್ಯೂಯಿಂಗ್ ಗಮ್ ಜಗಿದು ಉಗುಳಿದ ವಿಚಾರಕ್ಕೆ ಬೆಳ್ತಂಗಡಿ ಚರ್ಚ್ ರಸ್ತೆ ಬಳಿ ಬುಧವಾರ ಸಂಜೆ ಇತ್ತಂಡಗಳು ಹೊಡೆದಾಡಿಕೊಂಡಿದ್ದು, ರಾತ್ರಿ ಗುರುವಾಯನಕೆರೆಯಲ್ಲಿ ತಂಡವೊಂದು ಓರ್ವನ ಮೇಲೆ ಹಲ್ಲೆ ನಡೆಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.
ಗುರುವಾಯನಕೆರೆ ಅಲಾದಿಕೊಟ್ಟಿಗೆ ನಿವಾಸಿ ನೌಷಾದ್ (17) ಎಂಬಾತ ತನ್ನ ಮಿತ್ರ ಮಹಮ್ಮದ್ ಸಫಾನ್ ಎಂಬಾತನೊಂದಿಗೆ ಚರ್ಚ್ ರೋಡ್ ಬಳಿ ನಿಂತು ಮಾತನಾಡುತ್ತಿದ್ದು, ಚ್ಯೂಯಿಂಗ್ ಗಮ್ ಉಗಿದ ವಿಷಯದಲ್ಲಿ ದೀಪಕ್, ರಾಜ, ನಾಗಭೂಷಣ್ ಮೊದಲಾದವರು ಜಲ್ಲಿ ಕಲ್ಲಿನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿದರೆಂದು ನೌಷಾದ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಅದೇ ರೀತಿ ಕಲ್ಲಗುಡ್ಡೆ ನಿವಾಸಿ ನಾಗಭೂಷಣ್ (18) ಎಂಬಾತನ ಮೇಲೆ ಚರ್ಚ್ ರಸ್ತೆ ಬಳಿ ನಿಂತಿದ್ದಾಗ ಮುಸ್ತಾಕ್, ಜುನೈದ್, ಕಲಂದರ್, ಅಜ್ಜು ಮೊದಲಾದವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾನೆ.
ಎರಡು ಕಡೆಗಳಿಂದಲೂ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದರ ಮುಂದುವರಿದ ಭಾಗ ಎಂಬಂತೆ, ಗುರುವಾಯನಕೆರೆಯ ಉಪ್ಪಿನಂಗಡಿ ರಸ್ತೆಯಲ್ಲಿರುವ ಕೋಲ್ಡ್ ಹೌಸ್‌ನಲ್ಲಿ ನಿಂತುಕೊಂಡಿದ್ದ ಕೊಜಪ್ಪಾಡಿಯ ಶೇಷಗಿರಿ ನಿವಾಸಿ ಕವನ್ (22) ಎಂಬಾತನ ಮೇಲೆ ತಂಡ ಹಲ್ಲೆ ನಡೆಸಿತು. ರಾತ್ರಿ ಪವರ್ ಕಟ್ ಇರುವ ಸಮಯದಲ್ಲೇ ಈ ಹಲ್ಲೆ ನಡೆದಿದೆ. ಇರ್ಷಾದ್, ಜಾಫರ್, ಅಜರ್, ಅಣ್ಣು ಮೊದಲಾದವರು ಮರದ ರೀಪಿನಿಂದ ಕವನ್ ತಲೆ, ಮುಖಕ್ಕೆ ಹೊಡೆದಿದ್ದಾರೆ. ಗಾಯಗೊಂಡ ಕವನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.