ದಕ್ಷಿಣ ಕನ್ನಡ

ಒಂಟಿ ಮಹಿಳೆಯರ ದೋಚುವ ಕಳ್ಳರ ಸೆರೆ

Published On :

ಮಂಗಳೂರು: ಒಂಟಿ ಮಹಿಳೆಯರನ್ನು ಹೊಂಚು ಹಾಕಿ ಚಿನ್ನಾಭರಣ ಅಪಹರಿಸುತ್ತಿದ್ದ ಮೂವರು ನಟೋರಿಯಸ್ ಕಳ್ಳರನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 23ಕ್ಕೂ ಹೆಚ್ಚು ಪ್ರಕರಣಗಳಿರುವ ಕುಖ್ಯಾತ ಉಪ್ಪಳ, ಪೈವಳಿಕೆ ಸಾಹಿಲ್, ಬಂಟ್ವಾಳ ಗೂಡಿನಬಳಿ ರಫೀಕ್, ಪುದು ಸಾದಕ್ ಅಲಿ ಬಂಧಿಸಿ 3 ದಿನ ಕಳೆದಿದೆ. ಕೃತ್ಯಕ್ಕೆ ಸಹಕರಿಸಿದವರ ಮೇಲೆ ಪ್ರಕರಣ ದಾಖಲಿಸಿಲ್ಲ. ಜತೆಗೆ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಪೊಲೀಸರಿಗೆ ಮೇಲಧಿಕಾರಿಗಳು, ರಾಜಕೀಯ ಶಕ್ತಿಗಳು ಒತ್ತಡ ಹಾಕಿರುವ ಮಾತು ಕೇಳಿ ಬಂದಿದೆ.
 ಆರೋಪಿಗಳನ್ನು ಮಂಗಳವಾರ ಕೋರ್ಟ್‌ಗೆ ಹಾಜರುಪಡಿಸಿ 4 ದಿನ ಪೊಲೀಸ್ ಕಸ್ಟಡಿ ತೆಗೆದುಕೊಂಡಿದ್ದಾರೆ. ಪಾಂಡೇಶ್ವರದ ಎಂ.ಆರ್. ಭಟ್ ಅವರಿಂದ ದೋಚಿದ 12 ಪವನ್, ಬೋಳಾರದಲ್ಲಿ ಮಹಿಳೆ ಕುತ್ತಿಗೆಯಿಂದ  ಕಸಿದ ಚಿನ್ನಾಭರಣ ಪ್ರಕರಣಗಳನ್ನು ವಿಚಾರಣೆ ವೇಳೆ ಚೋರರು ಒಪ್ಪಿಕೊಂಡಿದ್ದು, ಚಿನ್ನಾಭರಣ ವಶವಾಗಿದೆ. ಈ ಆರೋಪಿಗಳ ವಿರುದ್ಧ ಬಂಟ್ವಾಳ ಸಹಿತ ಜಿಲ್ಲೆಯಲ್ಲಿ 23ಕ್ಕೂ ಹೆಚ್ಚು ಪ್ರಕರಣಗಳಿವೆ.
ಚೋರ ಪತ್ನಿಯ ರಕ್ಷಣೆ: ಒಂಟಿ ಮಹಿಳೆಯರನ್ನೇ ದೋಚುವ ಈ ದುಷ್ಟರು ಒಟ್ಟು ಮಾಡಿದ ಕಳ್ಳತನದ ಮಾಲನ್ನು ಸಾಹಿಲ್ ಎಂಬಾತನ ಪತ್ನಿ ಫೈನಾನ್ಸ್‌ಗೆ ಹೋಗಿ ನೀಡುತ್ತಿದ್ದಳು. ಆದರೆ ಈಕೆಯ ಮೇಲೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಚಿನ್ನಾಭರಣ ಪಡೆದುಕೊಂಡಿರುವ ಫೈನಾನ್ಸ್ ಮೇಲೂ ಕೇಸ್ ದಾಖಲಾಗಿಲ್ಲ. 'ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಇನ್ನು ಹಲವು ಪ್ರಕರಣಗಳಲ್ಲಿ ರಿಕವರಿಯಾಗಬೇಕು. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಮುಂದಿನ ವಿಚಾರಣೆಯಿಂದ ತಿಳಿದುಬರಲಿದೆ' ಎಂದು ಎಸಿಪಿ ಪವನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.