ದಕ್ಷಿಣ ಕನ್ನಡ

ಸೌಜನ್ಯ ಕೊಲೆ ಪ್ರಕರಣ; ಉಪವಾಸ ಸತ್ಯಾಗ್ರಹ ನಾಳೆ

Published On :

ಬೆಳ್ತಂಗಡಿ: ಡಿ.ವೈ.ಎಫ್.ಐ, ಜೆ.ಎಂ.ಎಸ್, ಎಸ್.ಎಫ್.ಐ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ  ಜಂಟಿ ಆಶ್ರಯದಲ್ಲಿ ಸೌಜನ್ಯ ಪ್ರಕರಣ ನ್ಯಾಯ ಕೊಡಿಸಿ ಜನರ ಬದುಕು ಉಳಿಸಿ ಬಗ್ಗೆ ರಾಜ್ಯದ ಪ್ರಮುಖ ಸ್ವಾಮೀಜಿಗಳ ನೇತೃತ್ವದಲ್ಲಿ ಜ.6ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಬೆಳ್ತಂಗಡಿ ತಾಲೂಕು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ ಎಲ್ ಮತ್ತು ಡಿವೈಎಫ್‌ಐ ಕಾರ್ಯದರ್ಶಿ ಪ್ರಶಾಂತ್ ತಿಳಿಸಿದ್ದಾರೆ.  ಮೈಸೂರು ಶ್ರೀಜ್ಞಾನ ಪ್ರಕಾಶಸ್ವಾಮಿಗಳು, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಸೇರಿದಂತೆ 16ಕ್ಕೂ ಹೆಚ್ಚು ರಾಜ್ಯದ ಪ್ರಮುಖ ಸ್ವಾಮೀಜಿ ಆಗಮಿಸಲಿದ್ದಾರೆ. ಜಿ.ವಿ. ಶ್ರೀರಾಮರೆಡ್ಡಿ, ಕೆ. ನೀಲಾ, ಬಿ.ಎಂ. ಭಟ್, ಶಿವಕುಮಾರ್, ಡಿವೈಎಫ್‌ಐ ಜಿಲ್ಲಾ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ದರ ಕಡಿತ


ಮಂಗಳೂರು: ಸ್ಟೇಟ್‌ಬ್ಯಾಂಕ್-ಪುತ್ತೂರು ಮತ್ತು ಸ್ಟೇಟ್‌ಬ್ಯಾಂಕ್-ಧರ್ಮಸ್ಥಳ ಮಧ್ಯೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರದಲ್ಲಿ ಏರಿಕೆ ಮಾಡಲಾಗಿತ್ತು. ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ದರವನ್ನು ಜ.5ರಿಂದ ಜಾರಿಗೆ ಬರುವಂತೆ ಇಳಿಕೆ ಮಾಡಿದೆ. ಸ್ಟೇಟ್‌ಬ್ಯಾಂಕ್-ಧರ್ಮಸ್ಥಳ ಬಸ್‌ನಲ್ಲಿ ಬಿಸಿರೋಡ್‌ಗೆ ಈಗಿನ ದರ ರು. 27 (ಹಿಂದಿನ ದರ ರು. 20), ಬಂಟ್ವಾಳ ರು. 23 ( 29), ಮಣಿಹಳ್ಳ ರು. 28 ( 34), ಕಾರಿಂಜಕ್ರಾಸ್ ರು. 30( 34), ಕಾವಳಕಟ್ಟೆ ರು. 35 ( 39), ಮೂರ್ಜೆ ರು. 40 ( 44), ಪುಂಜಾಲಕಟ್ಟೆ ರು. 40 ( 44), ಮಡಂತ್ಯಾರ್ ರು. 40 ( 44), ಪಣಕಜೆ ರು. 42, ( 49), ಮದ್ದಡ್ಕ ರು. 42 ( 49), ಗುರುವಾಯನಕೆರೆ ರು. 42 ( 49), ಬೆಳ್ತಂಗಡಿ ರು. 48 ( 54), ಉಜಿರೆ ರು. 50 ( 59), ಕನ್ಯಾಡಿ ರು. 55, ( 64), ಧರ್ಮಸ್ಥಳ ರು. 60, ( 64) ಪ್ರಯಾಣ ದರ ನಿಗದಿಪಡಿಸಲಾಗಿದೆ. ಪುತ್ತೂರು-ಸ್ಟೇಟ್‌ಬ್ಯಾಂಕ್ ಬಸ್‌ನಲ್ಲಿ ಬಿಸಿರೋಡ್ ರು. 20 ( 27), ಪಾಣೆಮಂಗಳೂರು ರು. 23 ( 29), ಮೆಲ್ಕಾರ್ ರು. 25 ( 31), ಕಲ್ಲಡ್ಕ ರು. 26, ( 32), ಸೂರಿಕುಮೇರು ರು. 27, ( 33), ಮಾಣಿ ರು. 28, ( 35), ನೇರಳಕಟ್ಟೆ ರು. 30, ( 37), ಮಿತ್ತೂರು ರು. 32 ( 38), ಕಬಕ ರು. 34 ( 39), ಪುತ್ತೂರಿಗೆ ರು. 38, ( 44) ದರ ನಿಗದಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.