ದಕ್ಷಿಣ ಕನ್ನಡ

ಹಾಡಹಗಲೇ ಮನೆಗೆ ಕನ್ನ; ರು. 3 ಲಕ್ಷ ಮೌಲ್ಯದ ಚಿನ್ನ ಆಭರಣ ಕಳವು

Published On :

ಬೆಳ್ತಂಗಡಿ: ಹಾಡ ಹಗಲೇ ಮನೆಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದೊಯ್ದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಇಲ್ಲಿಗೆ ಸಮೀಪದ ಭಾರತ್ ಮೋಟಾರ್ಸ್ ಪಕ್ಕದ ಡಾ. ಉಮಾನಾಥ ಶೆಣೈ ರಸ್ತೆ ಬದಿಯಲ್ಲಿರುವ
ಎಂ.ಎನ್. ಕಂಪ್ಯೂಟರ್ಸ್ ಉದ್ಯಮದ ಮಾಲೀಕ ದಯಾನಂದ ನಾಯಕ್ ಅವರ ಮನೆಯ ಬಾಗಿಲನ್ನು ಮುರಿದು ನುಗ್ಗಿರುವ ಕಳ್ಳರು ಕೋಣೆಯೊಂದರಲ್ಲಿದ್ದ ಕಬ್ಬಿಣದ ಅಲ್ಮೆರಾವನ್ನು ಮೆಟ್ಟುಗತ್ತಿಯನ್ನು ಉಪಯೋಗಿಸಿ ಒಡೆದಿದ್ದಾರೆ. ಕಪಾಟನ್ನು ಸಂಪೂರ್ಣ ಜಾಲಾಡಿರುವ ಕಳ್ಳರು ಬಂಗಾರದ ನೆಕ್ಲೆಸ್, ಮಾವಿನ ಎಳೆ ಸರ, ಎರಡು ಚಿನ್ನದ ಬಳೆ, ಚಿನ್ನದ ಚೈನ್, 5 ಉಂಗುರ, 4 ಜೊತೆ ಬೆಂಡೋಲೆ ಹಾಗೂ ಬೆಳ್ಳಿಯ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಇಲ್ಲಿ ಒಂದೇ ಕೌಂಪೌಂಡ್ ಒಳಗೆ 3 ಮನೆಯಿದ್ದು ನಾಯಕ್ ಅವರು ಸುಮಾರು 6 ವರ್ಷದಿಂದ ವಾಸವಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಸಹಿತ ಸಾಕಷ್ಟು ಜನ ಸಂಚಾರವಿರುವ ಪ್ರದೇಶ ಇದಾಗಿದೆ. ಪಕ್ಕದಲ್ಲೇ ಕಟ್ಟಡವೊಂದರ ಕಾಮಗಾರಿಯೂ ನಡೆಯುತ್ತಿದೆ. ಹೀಗಿದ್ದೂ ಕಳ್ಳತನ ನಡೆದಿರುವುದು ಪರಿಸರದವರಿಗೆ ಆಶ್ಚರ್ಯ ತಂದಿದೆ. ಸುಮಾರು 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗೆ ಈ ಕೃತ್ಯ ನಡೆದಿದೆ ಎಂದು ಅಂದಾಜಿಸಲಾಗಿದೆ. ನಾಯಕ್ ಅವರ ಮಕ್ಕಳು ಶಾಲೆಗೆ ಹೋಗಿದ್ದು ನಾಯಕ್ ಹಾಗೂ ಅವರ್ ಪತ್ನಿ ಹತ್ತೂವರೆ ಗಂಟೆಯ ಸುಮಾರಿಗೆ ಉದ್ಯೋಗ ನಿಮಿತ್ತ ಮನೆಗೆ ಬೀಗ ಹಾಕಿ ತೆರಳಿದ್ದಾರೆ. ಮಧ್ಯಾಹ್ನ ಊಟಕ್ಕೆಂದು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನಾಯಕ್ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.