ದಕ್ಷಿಣ ಕನ್ನಡ

ಕೇರಳ, ಕರ್ನಾಟಕ ಮಾರುಕಟ್ಟೆಗೆ ನಮೋ ಮೊಬೈಲ್

Published On :

ಮಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಾಮಧೇಯದ ನಮೋ ಸ್ಮಾರ್ಟ್ ಫೋನ್ ಮತ್ತು ಬೇಸಿಕ್ ಫೋನ್‌ಗಳನ್ನು ಕೇರಳ ಮತ್ತು ಕರ್ನಾಟಕ ಮಾರುಕಟ್ಟೆಗೆ ಬುಧವಾರ ಬಿಡುಗಡೆ ಮಾಡಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆ ಮಾಡಿದರು. ಮಂಗಳೂರು ಆರ್.ಕೆ.ಎಂಟರ್ ಪ್ರೈಸಸ್‌ನ ರಾಘವೇಂದ್ರ ಕುಡ್ವ ಎರಡು ರಾಜ್ಯಗಳಿಗೆ ನಮೋ ಮೊಬೈಲ್ ವಿತರಣೆ ಮಾಡಲಿದ್ದಾರೆ. ಎರಡೂ ರಾಜ್ಯದ ಪ್ರತಿ ನಗರ, ಪಟ್ಟಣ ಮತ್ತು ಹಳ್ಳಿಯಲ್ಲಿ ನಮೋ ಮೊಬೈಲ್ ಮಾರಾಟ ಮಾಡಲಿದ್ದೇವೆ. ಫೋನ್‌ಗಳು ಢಿಢಿಢಿ.ಛ್ಡಿಣ.ಛ್ಟ್ಟ್ಞಿಡಠಛ್ಠ.್ಛ್ಟಟ  ವೆಬ್‌ಸೈಟ್‌ನಲ್ಲಿಯೂ ಖರೀದಿಸಬಹುದು ಎಂದು ವಿತರಕ ರಾಘವೇಂದ್ರ ಕುಡ್ವ ತಿಳಿಸಿದ್ದಾರೆ. ನರೇಂದ್ರ ಮೋದಿಯ ಯುವ ಅಭಿಮಾನಿಗಳನ್ನು ಗಮನದಲ್ಲಿರಿಸಿ ಮೊಬೈಲ್ ರೂಪಿಸಲಾಗಿದೆ. ಇದರಲ್ಲಿ ನರೇಂದ್ರ ಮೋದಿ ಕುರಿತು ಮಾಹಿತಿ, ವಿಡಿಯೋ, ಆ್ಯಪ್‌ಗಳು ಲಭ್ಯ ಇವೆ. ನಮೋ ಸ್ಮಾರ್ಟ್ ಫೋನ್‌ಗಳು 10 ಸಾವಿರದಿಂದ 24 ಸಾವಿರವರೆಗೆ, ಬೇಸಿಕ್ ಮೊಬೈಲ್‌ಗಳು 1 ಸಾವಿರದಿಂದ 8 ಸಾವಿರವರೆಗಿನ ದರದಲ್ಲಿ ಹಲವು ಮಾದರಿಯಲ್ಲಿ ಲಭ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.