ದಕ್ಷಿಣ ಕನ್ನಡ

ಸಾಹಿತಿ, ಅನುವಾದಕ ಕೆ.ಕೆ.ನಾಯರ್ ನಿಧನ

Published On :

ಮಣಿಪಾಲ: ಸಾಹಿತಿ, ಅನುವಾದಕ ಕೆ.ಕೆ. ನಾಯರ್ (79)  ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದರು. ಕೇರಳದ ಅರತ್ತಿಲ್ಲ ಎಂಬ ಗ್ರಾಮದಲ್ಲಿ ನಾಯರ್ ಕುಟುಂಬದಲ್ಲಿ 1935ರಲ್ಲಿ ಜನಿಸಿದ್ದ ಅವರು ಪ್ರಸ್ತುತ ಮಣಿಪಾಲದಲ್ಲಿ ಪತ್ನಿ ಜಾನಕಿ ಅವರೊಂದಿಗೆ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಕ್ಕಳಿದ್ದಾರೆ.
ಸಾಹಿತ್ಯ ಬದುಕು: ಮಲಯಾಳಂ ಭಾಷೆಯಲ್ಲಿ ಕೇವಲ 4ನೇ ತರಗತಿಯವರೆಗೆ ಓದಿದ್ದ ನಾಯರ್‌ಗೆ ಮಲಯಾಳಂನಷ್ಟೇ ಕನ್ನಡ ಭಾಷೆಯ ಮೇಲೆ ಹಿಡಿತ ಇತ್ತು. 10ನೇ ವಯಸ್ಸಿನಲ್ಲಿಯೇ ಕವಿತೆಗಳನ್ನು ರಚಿಸಿದ್ದ ಅವರು, ಓದುವ ಗೀಳನ್ನು ಬಾಲ್ಯದಿಂದಲೇ ಬೆಳೆಸಿಕೊಂಡಿದ್ದರು. ಅವರು 1966ರಿಂದ 1994ರವರೆಗೆ ಮಣಿಪಾಲ ಪವರ್ ಪ್ರೆಸ್‌ನಲ್ಲಿ ಮೋನೊಟೈಪ್‌ಕಾಸ್ಟರ್  ಆಗಿ ಉದ್ಯೋಗಕ್ಕಾಗಿ ಮಣಿಪಾಲಕ್ಕೆ ಬಂದವರು, ಸಾಹಿತ್ಯ ರಚನೆಯನ್ನು ಗಂಭೀರವಾಗಿ ಪರಿಣಿಸಿದ್ದು 1960ರಲ್ಲಿ.
ಅವರು ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ 'ಒಂದು ಊರಿನ ಕತೆ' ಕಾದಂಬರಿಗೆ 1997ರಲ್ಲಿ ಮತ್ತು ಹಗ್ಗ ಕೃತಿಗೆ 2012ರಲ್ಲಿ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗಳು ಲಭಿಸಿವೆ.
ಅವರು ಕನ್ನಡಕ್ಕೆ ಅನುವಾದಿಸಿದ ಅಗ್ನಿಸಾಕ್ಷಿ, ಆಯ್ದ ಮಲಯಾಳ ಸಣ್ಣ ಕತೆಗಳು ಕೂಡ ಪ್ರಸಿದ್ಧ ಕೃತಿಗಳಾಗಿವೆ. ಕನ್ನಡದಿಂದ ಫಣಿಯಮ್ಮ, ಸರಸಮ್ಮನ ಸಮಾಧಿ, ಚಂದ್ರಗೀರಿಯ ತೀರದಲ್ಲಿ ಮುಂತಾದ ಕೃತಿಗಳನ್ನೂ ಮಲಯಾಳಂ ಭಾಷೆಗೆ ಅನುವಾದಿಸಿ ಮಲಯಾಳ ಸಾಹಿತ್ಯ ರಂಗದಲ್ಲಿಯೂ ಗುರುತಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.