ದಕ್ಷಿಣ ಕನ್ನಡ

ಪಾರ್ಕಿಂಗ್ ಸಮಸ್ಯೆಗೆ ವಿಶೇಷ ಸಭೆ: ಡಿಸಿ

Published On :

ಮಂಗಳೂರು: ನಗರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಈ ಬಗ್ಗೆ ಮುಂದಿನ ತಿಂಗಳು ವಿಶೇಷ ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡ)ಕಚೇರಿಯಲ್ಲಿ ಶನಿವಾರ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಹನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದರೂ ಅದಕ್ಕನುಗುಣವಾಗಿ ರಸ್ತೆ ಅಭಿವೃದ್ಧಿಯಾಗಿಲ್ಲ. ಬಹುಮಹಡಿ ವಾಣಿಜ್ಯ ಕಟ್ಟಡ ಮತ್ತು ಅಪಾರ್ಟ್‌ಮೆಂಟ್ ನಿರ್ಮಾಣದಲ್ಲೂ ಪಾರ್ಕಿಂಗ್ ವ್ಯವಸ್ಥೆ ವಿನ್ಯಾಸದಂತೆ ನಿರ್ಮಿಸಿಲ್ಲ. ಕೆಲವು ಕಟ್ಟಡಗಳಲ್ಲಿ ರಸ್ತೆ, ಫುಟ್‌ಪಾತ್, ಪರಸ್ಪರ ಕಟ್ಟಡ ಮಧ್ಯೆ ಜಾಗ ಇಲ್ಲದೆ ಪಾರ್ಕಿಂಗ್ ಅವಕಾಶ ಇಲ್ಲದೇ ನಿರ್ಮಿಸಿರುವುದು ಕಂಡುಬಂದಿದೆ. ಈ ಬಗ್ಗೆ ಕ್ರಮ ಜರುಗಿಸುವಂತೆ ಮೂಡಾ ಆಯುಕ್ತರಿಗೆ ಸೂಚಿಸಿದರು. ಗಣೇಶ್ ಕಾರ್ಣಿಕ್, ಐವನ್ ಡಿಸೋಜ, ಗೋಕುಲದಾಸ್ ನಾಯಕ್, ವೇಣುಗೋಪಾಲ ಇದ್ದರು.


ಕಡಬದಲ್ಲಿ ಕಂದಾಯ ಕಟ್ಟಡ ಶೀಘ್ರ ಆರಂಭ: ಕೃಷ್ಣಮೂರ್ತಿ


ಉಪ್ಪಿನಂಗಡಿ: ಕಡಬ ನಾಡ ಕಚೇರಿಗೆ ಪುತ್ತೂರು ಸಹಾಯಕ ಆಯುಕ್ತ ಕೃಷ್ಣ ಮೂರ್ತಿ ಭೇಟಿ ನೀಡಿ ಕಡಬದಲ್ಲಿ ಸುಸಜ್ಜಿತ ಕಂದಾಯ ಇಲಾಖಾ ಕಟ್ಟಡವನ್ನು ಶೀಘ್ರ ಆರಂಭಿಸುವ  ಭರವಸೆ ನೀಡಿದರು.  ಕಡಬದಲ್ಲಿ ಕಂದಾಯ ಇಲಾಖಾ ಕಟ್ಟಡ ನಿರ್ಮಿಸಲು ರು. 20 ಲಕ್ಷ ಸರ್ಕಾರದಿಂದ ಮಂಜೂರುಗೊಂಡಿದ್ದು, ಈಗಾಗಲೇ ಕಂದಾಯ ಇಲಾಖೆಗೆ ಕಾದಿರಿಸಿದ ಜಾಗದಲ್ಲಿ ಶೀಘ್ರದಲ್ಲಿ ಈ ಕಟ್ಟಡ ನಿರ್ಮಿಸಲಾಗುವುದು. ವಸತಿ ಅಡಿಸ್ಥಳ ಸಕ್ರಮದ 94 ಸಿ ಅರ್ಜಿ ಕಡಬ ಹೋಬಳಿಯಲ್ಲಿ ಸುಮಾರು 16,000 ಕ್ಕಿಂತಲೂ ಹೆಚ್ಚು ಬಂದಿವೆ ಎಂದು ಹೇಳಿದರು. ಕಡಬ ವಿಶೇಷ ತಹಸೀಲ್ದಾರ್ ಬಿ.ಸಿ. ಶಿವಪ್ಪ ಅವರು ನಾಡಕಚೇರಿ ಕಾರ್ಯವೈಕರಿಯ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಹನೀಫ್, ಸದಸ್ಯರಾದ ಫಝಲ್ ಕೋಡಿಂಬಾಳ, ಅಶ್ರಫ್ ಶೇಡಿಗುಂಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.