ಲಕ್ಷಾಂತರ ಮೌಲ್ಯದ ನಗ, ನಗದು ಕಳವು
ಕೋಟ: ಅಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮನೆಗೆ ಹೋದಾಗ ಮನೆಲ್ಲಿದ್ದ ಲಕ್ಷಾಂತರ ರು. ಮೌಲ್ಯದ ನಗ ನಗದು ಕಳ್ಳವಾಗಿರುವ ಘಟನೆ ಇಲ್ಲಿನ ಪಾಂಡೇಶ್ವರ ಗ್ರಾಮದ ಮಕ್ಕಿಮನೆ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸುನಂದ ಎಂಬವರು ಜು. 13ರಂದು ತಂಡವೊಂದರಿಂದ ಹಲ್ಲೆಗೊಳಗಾಗಿ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. 15ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ತನ್ನ ತಾಯಿ ಮನೆಯಾದ ಗುಂಡ್ಮಿಯಲ್ಲಿದ್ದು, ಶನಿವಾರ 9 ಗಂಟೆ ಗಂಡ ಪಿ. ರಘು ಅವರೊಂದಿಗೆ ಮನೆಗೆ ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಪೆಟ್ಟಿಗೆಯಲ್ಲಿಟ್ಟಿದ್ದ 26 ಗ್ರಾಂ ಚಿನ್ನದ ಹವಳದ ಸರ, 24 ಗ್ರಾಂ ತೂಕ ಬಳೆ, ಕೆಲವು ಬಟ್ಟೆಬರೆಗಳು, ರು. 4,670 ನಗದನ್ನು ಕಳವು ಮಾಡಲಾಗಿದೆ. ತಮ್ಮ ಮೇಲೆ ಹಲ್ಲೆ ನಡೆಸಿದ ಶಾಂತ, ಅವರ ಮಗ ಪ್ರಶಾಂತ ಮತ್ತು ಆತನ ಹೆಂಡತಿ ಚೈತ್ರ ಅವರೇ ಈ ಕಳ್ಳತನ ಮಾಡಿದ್ದಾರೆ.
ಕಳವಾದ ಸೊತ್ತುಗಳ ಒಟ್ಟು ಮೊತ್ತ ರು. 1,24,670 ಆಗಿರುತ್ತದೆ ಎಂದು ಸುನಂದ ಅವರು ಕೋಟ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕೆರೆಗೆ ಬಿದ್ದು ವ್ಯಕ್ತಿ ಸಾವು
ಕುಂದಾಪುರ: ಕುಡಿತ ಚಟ ಹೊಂದಿದ್ದ ವಲಸೆ ಕಾರ್ಮಿಕರೊಬ್ಬರು ಕೆರೆಗ ಬಿದ್ದು ಮೃತಪಟ್ಟ ಘಟನೆ ಶನಿವಾರ ಇಲ್ಲಿನ ಅಂಕದಕಟ್ಟೆ ಎಂಬಲ್ಲಿ ನಡೆದಿದೆ. ಮೃತರು ನಾಗರಾಜಪ್ಪ (45). ಅವರು ಮೂಲತಃ ಚಿತ್ರದುರ್ಗಾ ಜಿಲ್ಲೆಯ ಭರಮಸಾಗರದ ನಿವಾಸಿ. ಕಳೆದ 1 ವರ್ಷದಿಂದ ಕುಂದಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಶುಕ್ರವಾರವೂ ಕೆಲಸಕ್ಕೆ ಹೋಗಿದ್ದು ಸಂಜೆ ಮನೆಗೆ ಹಿಂದಕ್ಕೆ ಬಂದಿರಲಿಲ್ಲ. ಆದ್ದರಿಂದ ಅವರ ಮಗ ಪ್ರದೀಪ ಮತ್ತು ಅಕ್ಕನ ಮಗ ಗುರುಮೂರ್ತಿ ಅವರು ಹುಡುಕಿದಾಗ ಅಂಕದಕಟ್ಟೆಯ ಎಸ್ಟೇಟ್ವೊಂದರ ಹಿಂಭಾಗದಲ್ಲಿ ಅವರಣವಿಲ್ಲದ ಕೆರೆಯಲ್ಲಿ ನಾಗರಾಜಪ್ಪ ಅವರ ಶವ ದೊರೆತಿದೆ. ಅವರಿಗೆ ವಿಪರೀತ ಕುಡಿಯುವ ಚಟವಿದ್ದು, ಶನಿವಾರ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮಗ ಪ್ರದೀಪ ನೀಡಿರುವ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

