ದಕ್ಷಿಣ ಕನ್ನಡ

ಕಂದಾಯ ಇಲಾಖೆ ವಿರುದ್ಧ ಆಕ್ರೋಶ

Published On :

ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ನಡುಗಲ್ಲಿನಲ್ಲಿ ಗ್ರಾಮಸ್ಥರೇ ನಿರ್ಮಿಸಿಕೊಟ್ಟ ಗ್ರಾಮ ಲೆಕ್ಕಿಗ ಕಚೇರಿಗೆ ಗ್ರಾಮ ಲೆಕ್ಕಿಗರನ್ನು ಕಂದಾಯ ಇಲಾಖೆ ಸರಿಯಾಗಿ ಕಳುಹಿಸಿ ಕೊಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ನಾಲ್ಕೂರು ಗ್ರಾಮಸ್ಥರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಗುತ್ತಿಗಾರು ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ ಚಾರ್ಮಾತ ನೇತೃತ್ವದಲ್ಲಿ ಈ ದಿಢೀರ್ ಬೆಳವಣಿಗೆ ನಡೆಯಿತು. ಸ್ಥಳಕ್ಕೆ ಗಾಮಲೆಕ್ಕಿಗ ಮತ್ತು ಗ್ರಾಮ ಸಹಾಯಕರನ್ನು ಕರೆಸಿದ ಗ್ರಾಮಸ್ಥರು, ಅವರನ್ನು ಸರಿಯಾಗಿ ಕೆಲಸಕ್ಕೆ ಕಳುಹಿಸಿಕೊಡದೆ ಕಂದಾಯ ಇಲಾಖೆ ನಿರ್ಲಕ್ಷ್ಯ ವಹಿಸಿದ ಕುರಿತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕೊಂಬಾರು ಗ್ರಾಮಸಭೆ: ಮಾತಿನ ಚಕಮಕಿ
ಉಪ್ಪಿನಂಗಡಿ: ಅಸ್ತ್ರ ಸಂಸ್ಥೆಯವರು ಜನಪ್ರತಿನಿಧಿಗಳ ವಿರುದ್ಧ ಹಾಕಿದ್ದ ಕೇಸು ಹಿಂದಕ್ಕೆ ಪಡೆಯಲು ಪೊಲೀಸ್ ಇಲಾಖೆಗೆ ನಿರ್ಣಯ ಬರೆಯಲು ತಾ.ಪಂ. ಅಧ್ಯಕ್ಷರು ಸೂಚನೆ ನೀಡಿದ ಘಟನೆ ಕೊಂಬಾರು ಗ್ರಾಮ ಸಭೆಯಲ್ಲಿ ನಡೆದಿದೆ. ಸಭೆಯು ಗ್ರಾ.ಪಂ. ಅಧ್ಯಕ್ಷೆ ಯಶೋಧಾ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪುಟ್ಟರಾಜು ನೋಡೆಲ್ ಅಧಿಕಾರಿಯಾಗಿದ್ದರು.
ಸಭೆಯಲ್ಲಿ ಇಲಾಖಾ ಮಾಹಿತಿ ಆಗುತ್ತಿದ್ದಂತೆ ಮಧ್ಯ ಪ್ರವೇಶಸಿ ಮಾತನಾಡಿದ ಗ್ರಾಮಸ್ಥ ದಾಮೋದರ, ಈ ಹಿಂದೆ ಬೆಂಗಳೂರಿನ ಸಂಸ್ಥೆಯೊದು ಕೊಂಬಾರು ಗ್ರಾಮಕ್ಕೆ ಬಂದು ಗ್ರಾಮವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಗ್ರಾಮಸ್ಥರೊಳಗೆ ವೈಮನಸ್ಸು ಮೂಡಿಸಿದೆ. ಇದೀಗ ಅಸ್ತ್ರ ಸಂಸ್ಥೆಯವರು ಬಂದಿದ್ದು, ಈಗ ಎಲ್ಲಿದ್ದಾರೆ. ಅದರ ಮುಖ್ಯಸ್ಥ ಭ್ರಷ್ಟಾಚಾರ ನಡೆಸಿದ್ದಲ್ಲದೇ, ಅತ್ಯಾಚಾರ ಪ್ರಕರಣದಲ್ಲೂ ಸಿಲುಕಿದ್ದಾರೆ. ಇಂತವರು ನಮ್ಮ ಊರಿಗೆ ಬಂದು ನಮಗೆ ತೊಂದರೆ ನೀಡಿದ್ದಾರೆ ಎಂದರು.
ಇದರಿಂದ ಗ್ರಾಮಸ್ಥರೊಳಗೆ ಮಾತಿನ ಚಕಮಕಿ ನಡೆದು ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯೆ ಪ್ರವೇಶಿಸಿದ ತಾ.ಪಂ. ಅಧ್ಯಕ್ಷೆ ಪುಲಸ್ಯ ರ್ಯೆ, ಹೊರಗಿನವರು ಬಂದು ಗ್ರಾಮದ ಜನತೆಯಲ್ಲಿ ವೈಮನಸ್ಸು ಮಾಡಿಕೊಂಡು ಲಾಭ ಪಡೆಯುವುದು ಬೇಡ. ನಮ್ಮ ಮೇಲೆ ಹಾಕಿದ ಕೇಸನ್ನು ವಾಪಸ್ ಪಡೆಯಲು ಪೊಲೀಸ್ ಇಲಾಖೆಗೆ ಬರೆದುಕೊಳ್ಳುವ ಎಂದು ನಿರ್ಣಯ ಮಾಡುವಂತೆ ಕಾರ್ಯದರ್ಶಿಗೆ ಸೂಚಿಸಿದರು. ನಂತರ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮಾರಿ ವಾಸುದೇವನ್, ತಾಲೂಕು ಪಂಚಾಯಿತಿ ಸದಸ್ಯೆ ಸರೋಜಿನಿ ಜಯಪ್ರಕಾಶ್  ಮಾತನಾಡಿದರು.  ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಾರಿಜಾ ಸದಸ್ಯರಾದ ಪುರುಷೋತ್ತಮ, ಆನಂದ ಗೌಡ ಎ., ಚಿದಾನಂದ ದೇವುಪಾಲ್, ಮಾಯಿಲಪ್ಪ ಪೂಜಾರಿ, ಪುಷ್ಪಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.