ಮಾಂಸ ತಿನ್ನಿ, ಆದರೆ ಗೋಮಾಂಸ ಬೇಡ
ಮಂಗಳೂರು: ಹಾಸ್ಟೆಲ್ಗಳಲ್ಲಿ ಊಟ ಸರಿಯಾಗಿ ಸಿಕ್ಕುತ್ತಾ? ಎಷ್ಟು ಮಂದಿ ಸಸ್ಯಾಹಾರಿ, ಮಾಂಸಹಾರಿ ಕೈ ಎತ್ತಿ?
ಇದು ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಸೋಮವಾರ ಸಂಘನಿಕೇತನದಲ್ಲಿ ಈಶಾನ್ಯ ರಾಜ್ಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಕಷ್ಟ ಸುಖ ವಿಚಾರಿಸಿದ ಪರಿ.
ಸಸ್ಯಾಹಾರ ಎಂದಾಗ ಒಬ್ಬಾಕೆ ಮಾತ್ರ ಕೈ ಎತ್ತಿದಳು. ಮಾಂಸಾಹಾರ ಎಂದಾಗ ಒಬ್ಬಳನ್ನು ಹೊರತು ಪಡಿಸಿ ಎಲ್ಲರೂ ಕೈ ಎತ್ತಿದರು! 'ವಾರಕ್ಕೆ ಎಷ್ಟು ಬಾರಿ ಮಾಂಸಹಾರ ಕೊಡುತ್ತಾರೆ, ಇಲ್ಲಾಂದ್ರೆ ಕೇಳಿ ಪಡೆಯಿರಿ, ಮಾಂಸ ತಿನ್ನಿರಿ ಆದರೆ ಗೋಮಾಂಸ ತಿನ್ನಬೇಡಿ, ನಾವು ಅದನ್ನು ದೇವರಂತೆ ನೋಡುತ್ತೇವೆ' ಎಂದು ರಾಜ್ಯಪಾಲರು ಹೇಳಿದರು.
ಎಷ್ಟು ಮಂದಿ ಸ್ಥಳೀಯರ ಗೆಳತನ ಮಾಡಿದ್ದೀರಿ, ಹುಡುಗ ಹುಡುಗಿ ಜತೆ ಗೆಳತನ ಮಾಡುವುದು ಈಗ ಏನು ತಪ್ಪಲ್ಲ, ಸ್ಥಳೀಯ ವಿದ್ಯಾರ್ಥಿಗಳ ಜತೆ ಗೆಳತನ ಮಾಡಿ, ಹಬ್ಬ, ಹರಿದಿನಗಳಲ್ಲಿ ಪಾಲ್ಗೊಳ್ಳಿ, ಪರಸ್ಪರ ಸಂಸ್ಕೃತಿ ಅರಿತುಕೊಳ್ಳಿ ಎಂದರು. ಸ್ಥಳೀಯ ಸಹಪಾಠಿಗಳ ಮನೆಗೆ ಹಬ್ಬಕ್ಕೆ ಯಾರಾದರೂ ಹೋಗಿದ್ದೀರಾ ಎಂದಾಗ ಕೆಲವೇ ಕೆಲವು ಮಂದಿ ಕೈ ಎತ್ತಿದರು.
ಇದನ್ನು ಕಂಡ ರಾಜ್ಯಪಾಲರು ಆರ್ಎಸ್ಎಸ್ ಮುಖಂಡರನ್ನು ಕರೆದು ಪ್ರತಿ ಹತ್ತು ಮಕ್ಕಳ ಕೇರ್ ಟೇಕರ್ ಆಗಿ ಒಂದು ಮನೆಯವರನ್ನು ಗೊತ್ತುಪಡಿಸಿ, ಕಷ್ಟ, ಸುಖಗಳ ಜತೆ ಭಾಗಿಯಾಗಲಿ ಎಂದರು. ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಇಲ್ಲಿಯವರೇ ಪೋಷಕರಂತೆ ಇದ್ದರೆ ಅವರಿಗೆ ಧೈರ್ಯ ತುಂಬಿದಂತೆ ಆಗುತ್ತದೆ ಎಂದರು. ಕೇವಲ ಎ, ಬಿ, ಸಿ,ಡಿ ಕಲಿಯಲು ನೀವು ಇಲ್ಲಿಗೆ ಬಂದಿಲ್ಲ, ಇಲ್ಲಿನ ಸಂಸ್ಕೃತಿ ಅರಿಯಿರಿ, ದಕ್ಷಿಣ ಕನ್ನಡ ಜಿಲ್ಲೆ ಅನೇಕ ವೈವಿಧ್ಯತೆ ಮತ್ತು ಸಂಸ್ಕೃತಿಗೆ ಹೆಸರಾಗಿದೆ. ಇಲ್ಲಿಯವರನ್ನು ನಿಮ್ಮ ಊರಿಗೆ ಕರೆದುಕೊಂಡು ಹೋಗಿ ಎಂದು ಸಲಹೆ ಮಾಡಿದರು. ಭಾಷೆ ಅನೇಕ, ವೇಷ ಅನೇಕ, ಆದರೆ ದೇಶ ಒಂದೇ. ಇದೇ ನಮ್ಮನ್ನು ಒಟ್ಟುಗೂಡಿಸುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

