ದಕ್ಷಿಣ ಕನ್ನಡ

ಕೊಲೆ ಸ್ಕೆಚ್ ಆರೋಪಿಗಳಿಗೆ ದಿನದ ನ್ಯಾಯಾಂಗ ಬಂಧನ

Published On :

ಮಂಗಳೂರು: ಬಿಲ್ಡರ್‌ಗಳ ಸೆರೆಗೆ ಸ್ಕೆಚ್ ರೂಪಿಸಿ ಸಿಸಿಬಿ ಪೊಲೀಸರಿಂದ ಬಂಧಿತ ಆರೋಪಿ ಕಿರಣ್ ಮತ್ತು ಸುಬ್ರಹ್ಮಣ್ಯಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವರನ್ನು ಸೋಮವಾರ ಮತ್ತೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಪೊಲೀಸ್ ಕಸ್ಟಡಿ ಕೋರಲಿದ್ದಾರೆ. ಬಜ್ಪೆ ಪೆರ್ಮುದೆಯಲ್ಲಿ ಶೆಡ್‌ನಲ್ಲಿ ಕುಳಿತು ಬಿಲ್ಡರ್ ಕೊಲೆಗೆ ಸಂಚುರೂಪಿಸುತ್ತಿದ್ದ ಸಂದರ್ಭ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು. ಇನ್ನಿಬ್ಬರು ತಲೆ ಮರೆಸಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಪ್ರಕರಣ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಬೈಕ್ ಕಳವು
ಮಂಗಳೂರು: ಹಳೆ ಬಂದರು ಉತ್ತರ ಧಕ್ಕೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವಾದ ಘಟನೆ ವರದಿಯಾಗಿದೆ. ಜೂ.19ರಂದು ಬೈಕ್ ನಿಲ್ಲಿಸಿ ಸವಾರ ಅಬ್ದುಲ್ ತೌಸಿಫ್ ಕೆಲಸಕ್ಕೆ ಹೋಗಿದ್ದರು. ಮರುದಿನ ನೋಡಿದಾಗ ಬೈಕ್ ಕಳವಾಗಿದ್ದು ಗಮನಕ್ಕೆ ಬಂದಿತ್ತು. ಬೈಕ್ ಮೌಲ್ಯ ರು. 48 ಸಾವಿರ ಎಂದು ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರು ಅಪಘಾತ; ನಾಲ್ವರಿಗೆ ಗಾಯ
ವಿಟ್ಲ: ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ  ಇಲ್ಲಿಗೆ ಸಮೀಪದ ಕಬಕದ ನೀರಪಳಿಕೆಯಲ್ಲಿ ಭಾನುವಾರ ನಡೆದಿದೆ. ಪುತ್ತೂರು ತಾಲೂಕಿನ ಬನ್ನೂರು ನಿವಾಸಿಗಳಾದ ಅಶ್ರಫ್, ಸಾರಮ್ಮ, ಫಾತಿಮಾ, ಬಾಲಕ ಹನಸ್ ಎಂಬವರು ಗಾಯಗೊಂಡವರು ಎಂದು ಗುರುತಿಸಲಾಗಿದೆ. ಇವರು ವಿಟ್ಲದ ಕಂಬಳಬೆಟ್ಟು ಎಂಬಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಇಬ್ರಾಹಿಂ ಅವರಿಗೆ ಸೇರಿದ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಓಮ್ನಿಯೊಂದು ಓವರ್‌ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡು ಕಾರುಗಳೂ ಜಖಂಗೊಂಡಿದೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓಮ್ನಿ ಕಾರಿನಲ್ಲಿದ್ದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.