ಹಲಸು ಜನಪ್ರಿಯತೆಗೆ ತ್ರಿಸೂತ್ರ ಅಗತ್ಯ; ವೇಗಸ್
ವಿಟ್ಲ: ಹಲಸಿನ ಜನಪ್ರಿಯತೆಗೆ ಮೂರು ಸೂತ್ರಗಳಾದ ಉತ್ತಮ ತಳಿ ಆಯ್ಕೆ, ಹಲಸು ಉತ್ಪಾದನೆಗೆ ಕೈಗಾರಿಕೋದ್ಯಮಗಳ ಅಭಿವೃದ್ಧಿ, ಮಾರುಕಟ್ಟೆ ಅಗತ್ಯ ಎಂದು ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ಪಿ.ಎಸ್. ವೇಗಸ್ ಅಭಿಪ್ರಾಯಪಟ್ಟಿದ್ದಾರೆ.
ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀ ದೇವೀ ಭವನದಲ್ಲಿ ಭಾನುವಾರ, ಬೆಂಗಳೂರಿನ ಕೃಷಿ ವಿವಿ, ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘ, ಶ್ರೀ ಮಹಿಷಮರ್ದಿನಿ ಸೇವಾ ಸಂಘದ ಸಹಯೋಗದಲ್ಲಿ ಹಲಸಿನ ಹಬ್ಬದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್.ಆರ್. ರಂಗಮೂರ್ತಿ ಉದ್ಘಾಟಿಸಿದರು. ಸ್ವರ್ಣೋದ್ಯಮಿ ಮುಳಿಯ ಶ್ಯಾಮ ಭಟ್ ಧ್ವಜಾರೋಹಣ ನೆರವೇರಿಸಿದರು. ಕೃಷಿ ವಿ.ವಿ. ಸಹಪ್ರಾಧ್ಯಾಪಕ ಡಾ. ಶ್ಯಾಮಲಮ್ಮ ದಿಕ್ಸೂಚಿ ಭಾಷಣ ಮಾಡಿದರು. ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್, ಹಲಸು ಸ್ನೇಹಿ ಕೂಟದ ಮಲ್ಯ ಶಂಕರನಾರಾಯಣ ಭಟ್ ಇದ್ದರು.
ಹಲಸು ಸ್ನೇಹಿ ಕೂಟದ ಶ್ರೀಕೃಷ್ಣಪ್ರಸಾದ್ ಕೊಪ್ಪರತೊಟ್ಟು ಸ್ವಾಗತಿಸಿದರು. ಅಡಿಕೆ ಪತ್ರಿಕೆಯ ಸಂಪಾದಕ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಅಶೋಕ ಅಜಕ್ಕಳ ವಂದಿಸಿದರು. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ಮುಳಿಯ, ಉಬರು ರಾಜಗೋಪಾಲ ಭಟ್ ಸಹಕರಿಸಿದರು.
'ಹಲಸು ವಿಶ್ವದರ್ಶನ' ವಿಚಾರವನ್ನು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಿದರು. ಹಲಸು ಸ್ನೇಹಿಕೂಟದ ಕೃಷ್ಣಪ್ರಸಾದ್ ಕಡಂಬಿಲ ಸ್ವಾಗತಿಸಿದರು. ಬಳಿಕ ನಳಿನಿ ಮಾಲಂಕೋಡಿ ಮತ್ತು ಶಿಲ್ಪಾ ಕಜೆ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

