ಬಂತು ಅತ್ಯಾಧುನಿಕ ಅಗ್ನಿಶಮನ ವಾಹನ
ಮಂಗಳೂರು: ಎತ್ತರ ಕಟ್ಟಡದಲ್ಲಿ ಬೆಂಕಿ ಆಪತ್ತು ಸಂಭವಿಸಿದರೆ ಜನರನ್ನು ರಕ್ಷಿ ಬೆಂಕಿ ಆರಿಸಬಲ್ಲ ಎಎಲ್ಪಿ(ರಿಯಲ್ ಲ್ಯಾಡರ್ ಫ್ಲಾಟ್ಫಾರಂ)ವಾಹನ ಮಂಗಳೂರು ಅಗ್ನಿಶಾಮಕದಳಕ್ಕೆ ಸೇರ್ಪಡೆಯಾಗಿದೆ.
ಬೆಂಗಳೂರು, ಹುಬ್ಬಳ್ಳಿ ಹೊರತುಪಡಿಸಿದರೆ ರಾಜ್ಯದಲ್ಲಿ ಮಂಗಳೂರಲ್ಲಿ ಮಾತ್ರ ಈ ವಾಹನ ಇದೆ. ಇದರ ಬೆಲೆ ಸುಮಾರು ರು. 4.94 ಕೋಟಿ ಆಗಿದ್ದು, ಫಿನ್ಲ್ಯಾಂಡ್ನಿಂದ ತರಿಸಲಾಗಿದೆ. 32 ಮೀಟರ್ ಎತ್ತರ ವರೆಗೆ ಈ ಲ್ಯಾಡರ್ ಏರುತ್ತದೆ. ಇದರ ಮೇಲೆ ನಿಂತು ಸಿಬ್ಬಂದಿ ಅಗ್ನಿಶಮನಗೊಳಿಸಬಹುದು. ಅಲ್ಲದೆ ತ್ವರಿತವಾಗಿ ಮಹಡಿಯಿಂದ ಜನರನ್ನು ಇದಕ್ಕೆ ವರ್ಗಾಯಿಸಿ ಪ್ರಾಣಾಪಾಯದಿಂದ ರಕ್ಷಿಸಬಹುದು. ವೋಲ್ವೆ ಕಂಪನಿಯ ಟ್ರಕ್ ಮೇಲೆ ಬ್ರೋಂಟೋ ಸ್ಕೈಲಿಫ್ಟ್ ಹೆಸರಿನ ಎಎಲ್ಪಿಯನ್ನು ಅಳವಡಿಸಲಾಗಿದೆ. ಒಬ್ಬ ಆಪರೇಟರ್ ಮತ್ತು ಲ್ಯಾಡರ್ ಮೇಲೊಬ್ಬ ಸಿಬ್ಬಂದಿ ಇದ್ದರೂ ಇದರ ನಿರ್ವಹಣೆ ಮಾಡಬಹುದು. ಬಹುಮಹಡಿ ಕಟ್ಟಡ ಹೆಚ್ಚುತ್ತಿರುವ ಮಂಗಳೂರಿಗೆ ಈ ವಾಹನ ಉಪಯುಕ್ತವಾಗಿದೆ ಎಂದು ಮುಖ್ಯ ಅಗ್ನಿಶಾಮಕದಳ ಅಧಿಕಾರಿ ವರದರಾಜನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

