ದಕ್ಷಿಣ ಕನ್ನಡ

ಶೇರುದಾರರಿಗೆ ಹೆಚ್ಚುವರಿ ಲಾಭಾಂಶ: ಕಾರ್ಪ್ ಬ್ಯಾಂಕ್

Published On :

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ ಕಳೆದ ಆರ್ಥಿಕ ವರ್ಷದ ಲೆಕ್ಕಾಚಾರ ಪ್ರಕಾರ ಶೇರುದಾರರಿಗೆ ರು. 10ಕ್ಕೆ ರು. 2.25 ರಂತೆ ಲಾಭಾಂಶ ನೀಡಲು ನಿರ್ಧರಿಸಿದೆ. ಈಗಾಗಲೇ ರು. 4.50 ಮಧ್ಯಂತರ ಲಾಭಾಂಶ ಮೊತ್ತ ಪ್ರಕಟಿಸಿದ್ದು, ಅದಕ್ಕೆ ಹೆಚ್ಚುವರಿಯಾಗಿ ಈ ಲಾಭಾಂಶ ಶೇರುದಾರರಿಗೆ ಲಭ್ಯವಾಗಲಿದೆ.
 ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ 17ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಬ್ಯಾಂಕ್ ಅಧ್ಯಕ್ಷ ಎಸ್.ಆರ್. ಬನ್ಸಾಲ್ ಅಧ್ಯಕ್ಷತೆ ವಹಿಸಿದ್ದರು.
 ಮಾರ್ಚ್ ಅಂತ್ಯಕ್ಕೆ ಈ ಬ್ಯಾಂಕಿನ ಒಟ್ಟು ವಹಿವಾಟು ರು. 3.30 ಲಕ್ಷಕೋಟಿ ದಾಟಿದ್ದು, ಶೇ.16.07 ಪ್ರಗತಿ ದಾಖಲಿಸಿದೆ. ಠೇವಣಿ ಸಂಗ್ರಹದಲ್ಲಿ ರು. 1,93,393 ಕೋಟಿಗೆ ತಲಪಿದ್ದು, ಶೇ.16.5 ಪ್ರಗತಿ ಸಾಧಿಸಿದೆ. ಮುಂಗಡ ಸ್ವೀಕಾರ ರು. 1,37,086 ಕೋಟಿಯಾಗಿದ್ದು, ಶೇ.15.47 ಪ್ರಗತಿ ಕಂಡಿದೆ. ಬ್ಯಾಂಕ್ ಕೃಷಿ, ಸಣ್ಣ ಉದ್ದಿಮೆ, ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಸಾಲಕ್ಕೆ ಆದ್ಯತೆ ನೀಡುತ್ತಿದೆ. ಕೃಷಿ ಮುಂಗಡ ರು. 13,144 ಕೋಟಿ ತಲಪಿದ್ದು, ಶೇ.38.86 ಪ್ರಗತಿಯಾಗಿದೆ. ಸಣ್ಣ ಉದ್ದಿಮೆಗೆ ರು. 24,818 ಕೋಟಿ ಸಾಲ ನೀಡಿದ್ದು, ಶೇ.27.16 ಪ್ರಗತಿ ಸಾಧಿಸಿದೆ. ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ರು. 29,026 ಕೋಟಿ ನೀಡಿದ್ದು, ಶೇ.15.4 ಪ್ರಗತಿ ಕಾಣಿಸಿದೆ. ಬ್ಯಾಂಕ್ ಆದ್ಯತಾ ವಲಯಕ್ಕೆ ರು. 48,560 ಕೋಟಿ ಸಾಲ ನೀಡುವ ಮೂಲಕ ರಿಸರ್ವ್ ಬ್ಯಾಂಕ್ ಗುರಿ ಶೇ.40 ಮೀರುವಲ್ಲಿ ಸಫಲವಾಗಿದೆ.
 ವೇದಿಕೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರ್‌ಲಾಲ್ ದೌಲ್ತಾನಿ, ಬಿ.ಕೆ.ಶ್ರೀವಾಸ್ತವ, ನಿರ್ದೇಶಕರು, ಜನರಲ್ ಮೆನೇಜರ್‌ಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.