ಪಾಕ್ ಪರ ಘೋಷಣೆ ದೇಶದ್ರೋಹಿ ಕೃತ್ಯ: ಬಜರಂಗದಳ ಖಂಡನೆ
ಮಂಗಳೂರು: ಏಷ್ಯಾ ಕಪ್ ಕ್ರಿಕೆಟ್ನಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನರ ಪರ ಮೀರತ್ ಕಾಲೇಜ್ ವಿದ್ಯಾರ್ಥಿಗಳು ಜಿಂದಾಬಾದ್ ಕೂಗಿರುವುದು ದೇಶದ್ರೋಹ ಕೃತ್ಯ ಎಂದು ಬಜರಂಗದಳ ಆಪಾದಿಸಿದೆ. ಸ್ವಾಮಿ ವಿವೇಕಾನಂದ ಕಾಲೇಜ್ ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಂಡು, ಜಿಲ್ಲಾಡಳಿತ ಕೇಸ್ ದಾಖಲಿಸಿದೆ. ಮತಬ್ಯಾಂಕ್ ರಾಜಕೀಯಕೋಸ್ಕರ ಉತ್ತರ ಪ್ರದೇಶ ಸರ್ಕಾರ ಕೇಸ್ ವಾಪಸ್ ಪಡೆದುಕೊಂಡು ದೇಶದ್ರೋಹಿಗಳನ್ನು ಪರೋಕ್ಷವಾಗಿ ಬೆಂಬಲಿಸಿದೆ. ದೇಶದ ಎಲ್ಲ ಪ್ರಜೆಗಳು ಈ ಘಟನೆಯನ್ನು ಸಾರ್ವಜನಿಕವಾಗಿ ಖಂಡಿಸಬೇಕು ಎಂದು ಪ್ರಾಂತ ಸಂಯೋಜಕ ಶರಣ್ ಪಂಪ್ವೆಲ್ ವಿನಂತಿಸಿದ್ದಾರೆ.
'ದ್ರೋಹಿಗಳ ಹೆಸರಿಸಿ
ಬಹುಮಾನ ಗೆಲ್ಲಿ'
ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ದ್ರೋಹ ಮಾಡಿದ ಹತ್ತು ಮಂದಿ ಜನಪ್ರತಿನಿಧಿಗಳ ಪಟ್ಟಿಯನ್ನು ದಾರಿ ಸಂಘಟನೆ ಪ್ರಕಟಿಸಿದೆ. ಇದರಲ್ಲಿ ಅತಿ ಹೆಚ್ಚಿನ ದ್ರೋಹ ಬಗೆದವರನ್ನು ಕ್ರಮವಾಗಿ ಒಂದರ ಹಿಂದೆ ಹೆಸರಿಸಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು ಘೋಷಣೆ ಮಾಡಿದೆ. ಜಿಲ್ಲೆಯ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಅಭಯಚಂದ್ರ ಜೈನ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮತ್ತು ಶಾಸಕರು, ಸಂಸದರ ಹೆಸರುಗಳನ್ನು ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

