ರೈತ, ಮಹಿಳೆಯರಿಗೆ ಎಸ್ಸಿಡಿಸಿಸಿ ಕ್ರೆಡಿಟ್ ಕಾರ್ಡ್
ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ಶತಮಾನೋತ್ಸವ ಆಚರಿಸಲಿದ್ದು ಅದಕ್ಕೆ ಮುನ್ನುಡಿಯೆಂಬಂತೆ ದೇಶದಲ್ಲಿಯೇ ಪ್ರಥಮವೆಂಬ ರೀತಿಯಲ್ಲಿ ಪ್ರಾಥಮಿಕ ಸಹಕಾರಿ ಬ್ಯಾಂಕಿನ ಸದಸ್ಯತ್ವ ಹೊಂದಿರುವ 95 ಸಾವಿರ ರೈತರಿಗೆ ಹಾಗೂ ನವೋದಯ ಗುಂಪಿನ ಮಹಿಳೆಯರಿಗೆ ರೂಪೆ ಕ್ರೆಡಿಟ್ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ಶುಕ್ರವಾರ ಬೆಳ್ಮಣ್ ಶ್ರೀಕೃಷ್ಣ ಕಾಂಪ್ಲೆಕ್ಸಿನಲ್ಲಿ ಬ್ಯಾಂಕಿನ 68ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಗ್ರಾಮಗಳಲ್ಲಿ ಬ್ಯಾಂಕುಗಳು ಜನತೆಗೆ ಉತ್ತಮ ಸೇವೆಯನ್ನು ನೀಡುತ್ತ ಬಂದಲ್ಲಿ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದರು.
ನೂತನವಾಗಿ ಪ್ರಾರಂಭಗೊಂಡ ಶಾಖೆಯಲ್ಲಿ ಈಗಾಗಲೇ ರು. 7.50 ಕೋಟಿ ಠೇವಣಿ ಇದ್ದು ಬ್ಯಾಂಕ್ ರು. 75 ಕೋಟಿ ಸಾಲ ನೀಡುವ ಸಾಮರ್ಥ್ಯ ಹೊಂದಿದೆ ಎಂದರು.
ಜನ ಸಾಮಾನ್ಯರ ಬ್ಯಾಂಕ್: ಈಗಾಗಲೇ ಜನಸಾಮಾನ್ಯರಲ್ಲಿ ಆಧಾರ್ ಮತ್ತಿನ್ನಿತರ ದಾಖಲೆಗಳ ಬಗ್ಗೆ ಗೊಂದಲವಿದೆ. ನಮ್ಮ ಬ್ಯಾಂಕ್ ಜನ ಸಾಮಾನ್ಯರ ಬ್ಯಾಂಕ್ ಆಗಿದ್ದು ಇಲ್ಲಿ ಖಾತೆ ಪ್ರಾರಂಭಿಸಲು, ಸಾಲ ಪಡೆಯಲು, ಠೇವಣಾತಿ ಮಾಡಲು ಆಲೆದಾಡಬೇಕಾಗಿಲ್ಲ. ದಿನದ ಸಂಜೆವರೆಗೂ ಹಣ ಪಡೆಯುವ ಹಾಗೂ ಪಾವತಿಸುವ ವ್ಯವಸ್ಥೆಯಿದೆ. ಶೀಘ್ರವಾಗಿ ಶಾಖೆಗಳ ಸಂಖ್ಯೆ 100ನ್ನು ದಾಟಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳ್ಮಣ್ ಸಂತ ಜೋಸೆಫರ ಚರ್ಚ್ನ ಧರ್ಮಗುರು ರೆ.ಫಾ. ಲಾರೆನ್ ಬಿ. ಡಿಸೋಜಾ ಗಣಕೀಕರಣಕ್ಕೆ ಚಾಲನೆ ನೀಡಿದರು. ಜ್ಯೋತಿಷ್ಯ ವಿದ್ವಾನ್ ವೇದಮೂರ್ತಿ ಬಿ. ವಾಸುದೇವ ತಂತ್ರಿ ಭದ್ರತಾ ಕೋಶ ಉದ್ಘಾಟಿಸಿದರು.
ಬೆಳ್ಮಣ್ ಶ್ರೀಕೃಷ್ಣ ಗ್ರೂಪ್ನ ಮಾಲಿಕ ಎಸ್. ಕೆ. ಸಾಲ್ಯಾನ್, ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ದೇವೇಂದ್ರ ನಾಯಕ್, ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕ ಎಂ. ಗೋಪಾಲಕೃಷ್ಣ ಭಟ್, ಬ್ಯಾಂಕಿನ ನಿಗರ್ದೇಶಕ ಎಂ. ವಾದಿರಾಜ ಶೆಟ್ಟಿ, ಭಾಸ್ಕರ. ಎಸ್. ಕೋಟ್ಯಾನ್, ಹೆಬ್ರಿ ವಿ. ಎಸ್. ಎಸ್. ಬ್ಯಾಂಕಿನ ಆಧ್ಯಕ್ಷ ಕರುಣಾಕರ ಶೆಟ್ಟಿ, ಹೆರ್ಮುಂಡೆ ಭವಾನಿ ಶಂಕರ್ ನಾಯಕ್, ವರಂಗದ ರವಿ ಪೂಜಾರಿ, ಇನ್ನಂಜೆಯ ರಾಜೇಶ್, ಕಾರ್ಕಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಕುಮಾರ್ ಜೈನ್ ಇದ್ದರು. ನೂತನ ಶಾಖಾ ಪ್ರಬಂಧಕ ಜಗದೀಶ್ ಶೆಟ್ಟಿ, ಬ್ಯಾಂಕಿನ ಸಹಾಯಕ ಅಧಿಕಾರಿ ದಾಮೋದರ್, ಕಟ್ಟಡದ ಮಾಲಕ ಎಸ್. ಕೆ. ಸಾಲ್ಯಾನ್ ದಂಪತಿಯನ್ನು ಸಮ್ಮಾನಿಸಲಾಯಿತು. ನೂತನವಾಗಿ ಪ್ರಾರಂಭಗೊಂಡ ಸ್ವಸಹಾಯ ಗುಂಪುಗಳಾದ ದತ್ತಗುರು, ಕಣಪಾ, ಆದಿಮಾಯೆ, ಚಿಗುರು, ಸೃಷ್ಟಿ, ಗಾಯತ್ರಿ, ಸ್ವಾತಿ ನವೋದಯ ಗುಂಪುಗಳಿಗೆ ಕಡತ ಹಸ್ತಾಂತರಿಸಲಾಯಿತು. ಸ್ವಸಹಾಯ ಸಂಘಗಳ ಮೇಲ್ವಿಚಾರಕ ನಾರಾಯಣ, ಹರಿನಾಥ, ವಲಯ ಮೇಲ್ವಿಚಾರಕ ಜಯಂತ, ಗುಂಪು ನಿರ್ಮಾಣದ ರೂವಾರಿಗಳಾದ ರಾಘವೇಂದ್ರ, ಮೋಹಿನಿ ಬೋಳ, ಯಶೋಧ, ಸುಜಾತಾ, ಅಮಿತಾ, ಸುಧಾಕರ, ಪ್ರಶಾಂತ, ಮೋಹಿನಿ ಮಿಯಾರ್ರನ್ನು ಗೌರವಿಸಲಾಯಿತು. ಬ್ಯಾಂಕಿನ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್ ್ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ಎಂ. ಗೋಪಾಲಕೃಷ್ಣ ಭಟ್ ಧನ್ಯವಾದವಿತ್ತರು. ಸಾಣೂರು ಮೋಹನದಾಸ ಪ್ರಭು ನಿರೂಪಿಸಿದರು.
ಅದೃಷ್ಟಶಾಲಿಗಳ ಆಯ್ಕೆ
ಕಾರ್ಯಕ್ರಮಕ್ಕೆ ಮೆರಗು ನೀಡುವ ಉದ್ದೇಶದಿಂದ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಅವರು ಕಾರ್ಯಕ್ರಮದಲ್ಲಿ ಸಂಚಯ ಖಾತೆ ಹಾಗೂ ನಿರಖು ಠೇವಣಿ ಖಾತೆದಾರರ ಅದೃಷ್ಟಶಾಲಿ ಆಯ್ಕೆ ನಡೆದು ಸಂಚಯ ಖಾತೆ ವಿಭಾಗದಲ್ಲಿ ರಾಧಾ ಪ್ರಥಮ ಬಹುಮಾನದ 4 ಗ್ರಾಂ ಚಿನ್ನದ ನಾಣ್ಯ ಪಡೆದರೆ, ಹರೀಶ್ ಪೂಜಾರಿ ದ್ವಿತೀಯ ಬಹುಮಾನದ 2 ಗ್ರಾಂ ಚಿನ್ನದ ನಾಣ್ಯ ಪಡೆದರು. ನಿರಖು ಠೇವಣಿ ದಾರರ ಪೈಕಿ ಪಾಂಡು ಪ್ರಭು 4 ಗ್ರಾಂ ಚಿನ್ನದ ನಾಣ್ಯದ ಪ್ರಥಮ ಹಾಗೂ ಸುಬ್ರಹ್ಮಣ್ಯ 2 ಗ್ರಾಂ ಚಿನ್ನದ ನಾಣ್ಯದ ದ್ವಿತೀಯ ಬಹುಮಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

