ದಕ್ಷಿಣ ಕನ್ನಡ

ಸುಳ್ಯದಲ್ಲಿ ರಸ್ತೆ ರಾಜಕೀಯ: ಆರೋಪ- ಪ್ರತ್ಯಾರೋಪ

Published On :

ಸುಳ್ಯ: ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲೂ ಜನರಿಂದ ಹೀನಾಯವಾಗಿ ತಿರಸ್ಕರಿಸಲ್ಪಟ್ಟ ನಂತರ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡರು ನಮ್ಮ ಶಾಸಕರು ಮತ್ತು ಜಿಪಂ ಸದಸ್ಯರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಪ್ರಧಾನ ಕಾರ್ಯದರ್ಶಿ ಮುಳಿಯ ಕೇಶವ ಭಟ್ ಹೇಳಿದ್ದಾರೆ.
ಸುಳ್ಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಲೂರು ಕೆಮ್ರಾಜೆ ಚುನಾವಣೆಯಲ್ಲಿ ಸೋತ ನಂತರ ಹಾಗೂ ಲೋಕಸಭಾ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಬೆಳ್ಳಾರೆ- ನಿಂತಿಕಲ್ಲು ರಸ್ತೆಯ ಗುದ್ದಲಿಪೂಜೆ ಎಂಬ ಬೀದಿ ನಾಟಕವನ್ನು ತನ್ನ ಸಂಗಡಿಗರೊಂದಿಗೆ ನಡೆಸಿ, ಅಲ್ಲಿ ಕಳಪೆ ಮಟ್ಟದ ಮಾತುಗಳನ್ನು ಶಾಸಕರಾದ ಅಂಗಾರ ಅವರ ಬಗ್ಗೆ ಮತ್ತು ಬೆಳ್ಳಾರೆ ಜಿಪಂ ಸದಸ್ಯೆ ಶ್ರಿ ಆಶಾ ತಿಮ್ಮಪ್ಪ ಬಗ್ಗೆ ಆಡಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.
ಈ ರಸ್ತೆ ಕಾಮಗಾರಿಗಳಲ್ಲಿ ಶಾಸಕರು ಹಾಗೂ ಜಿ.ಪಂ.ಸದಸ್ಯರು ಹಣ ತಿಂದಿರುವುದಾಗಿ ವೆಂಕಪ್ಪ ಗೌಡರು ಮಾಡಿದ ಆರೋಪಕ್ಕೆ ಅವರಲ್ಲಿ ದಾಖಲೆ ಇದ್ದರೆ ಕೂಡಲೇ ಬಿಡುಗಡೆಗೊಳಿಸಬೇಕು. ಅಲ್ಲದಿದ್ದರೆ ಅವರದೇ ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ಉನ್ನತ ತನಿಖಾ ಸಂಸ್ಥೆಯಾದ ಲೋಕಾಯುಕ್ತ ಅಥವಾ ಸಿ.ಬಿ.ಐ.ನಂಥ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್. ಪ್ರಸಾದ್, ಜಿಪಂ ಸದಸ್ಯ ನವೀನ್ ಕುಮಾರ್ ಮೇನಾಲ, ನಪಂ ಸದಸ್ಯ ಪ್ರಕಾಶ್ ಹೆಗ್ಡೆ, ಪಕ್ಷದ ನಾಯಕರಾದ ಕೃಪಾಶಂಕರ ತುದಿಯಡ್ಕ, ಸೋಮನಾಥ ಪೂಜಾರಿ, ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಭೋದ್ ಶೆಟ್ಟಿ ಮೇನಾಲ, ಚಂದ್ರಪ್ರಕಾಶ್, ಕುಶಾಲಪ್ಪ ಪೆರುವಾಜೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.