ದಕ್ಷಿಣ ಕನ್ನಡ

ದೇಶದ ಅಭಿವೃದ್ಧಿ ಯುವಶಕ್ತಿ ಜವಬ್ದಾರಿ: ಮೈದಿನ್ ಬಾವ

Published On :

ಮಂಗಳೂರು: ಭಾರತದಲ್ಲಿ ಯುವಶಕ್ತಿ ಪ್ರಬಲಗೊಂಡಿದ್ದು, ಭವಿಷ್ಯದಲ್ಲಿ ದೇಶವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಮೈದಿನ್ ಬಾವ ಹೇಳಿದರು. ಸಹ್ಯಾದ್ರಿ ಕಾಲೇಜಿನಲ್ಲಿ ಗುರುವಾರ ನಡೆದ ಎಸ್‌ಪಿಎಲ್ 2014 ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಬುದ್ದಿಶಕ್ತಿಯನ್ನು ಹೆಚ್ಚಿಸಿದರೆ, ಕ್ರೀಡೆ ಮನೋಬಲ, ಆತ್ಮವಿಶ್ವಾಸ ವೃದ್ಧಿಗೊಳಿಸುತ್ತದೆ. ಇಂದು ಪೈಪೋಟಿಯ ನಡುವೆ ಅವಕಾಶಗಳ ಲಭ್ಯತೆ ಕಡಿಮೆ. ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಅವಕಾಶಗಳನ್ನು ಬಾಚಿಕೊಳ್ಳಬಹುದು. ಎಂಜಿನಿಯರಿಂಗ್, ಡಾಕ್ಟರ್ ಆಗುವಲ್ಲಿ ತೋರುವ ಆಸಕ್ತಿ ದೇಶ ಸೇವೆ ನಿರ್ವಹಿಸಲೂ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮೊದಲ ದಿನದ ಪಂದ್ಯಾವಳಿಯಲ್ಲಿ ಒಟ್ಟು 18 ಕಾಲೇಜು ಪಾಲ್ಗೊಂಡಿದ್ದವು. ಸಹ್ಯಾದ್ರಿ ಕಾಲೇಜು ಮತ್ತು ಕೆನರಾ ಕಾಲೇಜು ತಂಡ ಪ್ರಥಮ ಹಂತದಲ್ಲಿ 10 ಓವರ್ ಪಂದ್ಯ ಆಡಿದರು. ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯದ ನಿರ್ದೇಶಕ ಡಾ.ಡಿ.ಎಲ್. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ.ಯು.ಎಂ. ಭೂಷಿ, ವ್ಯವಹಾರ ಆಡಳಿತ ನಿರ್ದೇಶಕ ಡಾ. ಅನಂತಪದ್ಮನಾಭ ಆಚಾರ್, ಎಸ್‌ಪಿಎಲ್ ಅಧ್ಯಕ್ಷ ಮನೀಶ್ ಬಿ ಗಟ್ಟಿ, ಸಿಇಒ ಭೂರಿಸ್ ಫೆರ್ನಾಂಡಿಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.