ಒಗ್ಗಟ್ಟು ಒಡೆಯುವ ಷಡ್ಯಂತ್ರಕ್ಕೆ ಬಲಿಯಾಗಬೇಡಿ: ಆಪ್ ವಿನಂತಿ
ಮಂಗಳೂರು: ನಾವೆಲ್ಲ ಆಮ್ ಆದ್ಮಿಗಳು ಒಟ್ಟಾಗಿ ಕಷ್ಟಪಟ್ಟು ಈ ಹಂತದವರೆಗೆ ಬಂದಿದ್ದೇವೆ. ಚುನಾವಣೆ ಸಂದರ್ಭ ಬಂದಾಗ ನಮ್ಮ ಒಗ್ಗಟ್ಟು ಒಡೆದು ಆಮ್ ಆದ್ಮಿ ಪಕ್ಷ ಸೋಲಿಸುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಆಪ್ ಕಾರ್ಯಕರ್ತರು ಬಲಿಯಾಗಬೇಡಿ ಎಂದು ದ.ಕ. ಕ್ಷೇತ್ರ ಅಭ್ಯರ್ಥಿ ಎಂ.ಆರ್.ವಾಸುದೇವ ವಿನಂತಿಸಿದ್ದಾರೆ.
ಡಾನ್ಬಾಸ್ಕೊ ಹಾಲ್ನಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಬಿಜೆಪಿಯೂ ಅಲ್ಲ ನಮೋ ಸದಸ್ಯನೂ ಅಲ್ಲ. ಭಾರತೀಯ ವಿದ್ಯಾಭವನ ಕಾರ್ಯದರ್ಶಿಯಾಗಿ, ಸಂಗೀತ ಪರಿಷತ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಮಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷನ ನೆಲೆಯಲ್ಲಿ ನನಗೆ ಚೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮಕ್ಕೆ ಕರೆದಾಗ ಹೋಗಿದ್ದೆ. ನಮೋ ಕಾರ್ಯಕರ್ತನಾಗಿ ಹೋಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಸಂಚಾಲಕ ರಾಬಟ್ ರೊಸಾರಿಯೋ ಅವರನ್ನು ಬದಲಾಯಿಸಿ ಧರ್ಮೇಂದ್ರ ಅವರನ್ನು ನೇಮಕ ಮಾಡಿದ್ದೇವೆ. ರಾಬರ್ಟ್ ಅವರನ್ನು ಮೊದಲೇ ಅಮಾನತು ಮಾಡಿದ್ದೆವು. ಸುಧಾರಿಸುತ್ತಾರೆ ಎಂಬ ಕಾರಣಕ್ಕೆ ಜತೆಗೆ ಬರಲು ಬಿಟ್ಟೆವು. ಅವರು ಈಗ ನಮ್ಮ ಬಳಿ ಇಲ್ಲ ಎಂದರು.
ರಾಜಕೀಯ ಅನುಭವವಿಲ್ಲ: ಪ್ರಚಾರ ಅಭಿಯಾನದ ಮುಖ್ಯಸ್ಥ ಜಯಪ್ರಕಾಶ್ ಮಾತನಾಡಿ, ನಮಗೆ ರಾಜಕೀಯ ಅನುಭವ ಇಲ್ಲ. ಪರಿಸ್ಥಿತಿ ಹೇಗೆ ಏದುರಿಸಬೇಕು ಮತ್ತು ನಮ್ಮ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಲು ಕಾರ್ಯಾಗಾರ ನಡೆಸೋಣ ಎಂದರು.
'ನರೇಂದ್ರ ಮೋದಿಗಾಗಿ ಮತ ನೀಡುತ್ತೇವೆ ಎಂದು ಹೆಚ್ಚಿನವರು ಹೇಳುತ್ತಾರೆ. ಮೋದಿಗೆ ವೋಟು ಕೊಡಿ. ಆದರೆ ಮೋದಿ ಎರಡು ಕಡೆ ನಿಲ್ತಾರಲ್ಲ, ಮೋದಿ ಮಂಗಳೂರಿಗೆ ಬಂದು ಸ್ಪರ್ಧಿಸಿದರೆ ನೀಡಲಿ. ಇಲ್ಲಿ ನಮ್ಮ ಎದುರು ನಿಂತುಕೊಂಡವರು ಯಾರು, ಅವರಲ್ಲಿ ನಮ್ಮವರು ಯಾರು ನೋಡುವ. ನೋಟಾ ಬೇಕು ಎಂದು ಹೋರಾಟ ನಡೆಸಿದವು. ಈಗ ನಮ್ಮ ಪಕ್ಷ ಆಪ್ ಇದೆ ಅವರಿಗೆ ಮತ ನೀಡುವ' ಎಂದು ಇನ್ನೊಬ್ಬ ಕಾರ್ಯಕರ್ತರು ಹೇಳಿದರು.
ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಸುವಾಗ ರಸ್ತೆ ಬಂದ್ ಮಾಡಿ ಸುರತ್ಕಲ್ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆ ಮಾಡಿದ್ದರು. ಆದರೆ ಅದರಲ್ಲಿ ಹೆಚ್ಚಿನವರು ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ನೇರವಾಗಿ ಭಾಗಿಯಾದವರು. ಅವರೆಲ್ಲ ಈಗ ಆಮ್ಆದ್ಮಿಯಲ್ಲಿ ಇಲ್ಲ ಎಂದು ಸುರತ್ಕಲ್ನ ಕಾರ್ಯಕರ್ತರು ಹೇಳಿದರು.
ಸೂಕ್ತ ಮಾಹಿತಿ ಕೊಡಿ: ಕಾರ್ಯಕ್ರಮ ನಡೆಸುವಾಗ ಸರಿಯಾದ ಮಾಹಿತಿ ನೀಡಬೇಕು. ಇಲ್ಲಿ ಯೋಗ್ಯತೆ ಇದ್ದವರೆಲ್ಲ ಬಂದಿದ್ದಾರೆ, ಅದನ್ನು ಉಪಯೋಗಿಸುವ ಕೆಲಸ ಮುಖಂಡರು ಮಾಡಬೇಕು ಎಂದು ಮತ್ತೊಬ್ಬ ಹಿರಿಯ ಕಾರ್ಯಕರ್ತರು ಸಲಹೆ ಮಾಡಿದರು.
ನಾವು ಪ್ರಚಾರಕ್ಕೆ ಹೋಗುವಾಗ ಹೆಚ್ಚಿನವರು ಹೋ ಆಮ್ಅದ್ಮಿ ಬಂದ್ರು ಎಂದು ಸ್ವಾಗತಿಸುತ್ತಾರೆ. ಇನ್ನು ಕೆಲವಡೆ ಆಪ್ಗೆ ಅವಕಾಶ ಕೊಟ್ಟಾಗ ಆಡಳಿತ ಮಾಡಿಲ್ಲ ಏಕೆ ಎಂದು ಪ್ರಶ್ನಿಸುತ್ತಾರೆ ಆಗ ಮಾತ್ರ ನಮಗೆ ದಿಗಿಲಾಗುತ್ತದೆ. ಕಾಂಗ್ರೆಸ್ ಬೆಂಬಲ ಹಿಂದೆಗೆದುಕೊಂಡರು ಎಂದು ಹೇಳುತ್ತೇವೆ ಎಂದು ಕಾರ್ಯಕರ್ತರೊಬ್ಬರು ಅಭಿಪ್ರಾಯ ಹೇಳಿದರು.
ನಾನು ಬಿಜೆಪಿಯೂ ಅಲ್ಲ ನಮೋ ಸದಸ್ಯನೂ ಅಲ್ಲ. ಭಾರತೀಯ ವಿದ್ಯಾಭವನ ಕಾರ್ಯದರ್ಶಿಯಾಗಿ, ಸಂಗೀತ ಪರಿಷತ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.
-ಎಂ.ಆರ್. ವಾಸುದೇವ, ಅಭ್ಯರ್ಥಿ, ಆಪ್
ಬೆರಳೆಣಿಕೆ...!
ಕಾರ್ಯಕ್ರಮಕ್ಕೆ ಬೆರಳೆಣಿಕೆಯ ಜನ ಸೇರಿದ್ದೇವೆ. ನಾಳೆ ಪತ್ರಿಕೆಗಳಲ್ಲಿಯೂ ಬೆರಳೆಣಿಕೆ ಜನ ಕುರಿತು ವರದಿಯಾಗುತ್ತದೆ. ನಾವು ವ್ಯವಸ್ಥಿತವಾಗಿ ಸಭೆ ಆಯೋಜಿಸಬೇಕು ಎಂಬ ಸಲಹೆ ಕೇಳಿ ಬಂತು. ಕಾರ್ಯಕ್ರಮದಲ್ಲಿ 60 ಕಾರ್ಯಕರ್ತರು ಸೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

