ದಕ್ಷಿಣ ಕನ್ನಡ

ಇತರ ಪಕ್ಷ ನಾಯಕರ ಜತೆ ಊಟಕ್ಕೆ ಲಕ್ಷಗಟ್ಟಲೆ, ಕಾಂಗ್ರೆಸ್‌ನಿಂದ ಬಡವರಿಗೆ ರು. 1ಕ್ಕೆ ಅಕ್ಕಿ: ಆಸ್ಕರ್

Published On :

ಮಂಗಳೂರು:  ಇತರ ಪಕ್ಷದ ರಾಜಕೀಯ ನಾಯಕರು ತಮ್ಮ ಜತೆ ಒಂದು ಊಟಕ್ಕೆ 2.5 ಲಕ್ಷ, ರು. 20 ಸಾವಿರ ಫಿಕ್ಸ್ ಮಾಡಿದರೆ, ಕಾಂಗ್ರೆಸ್‌ಬಡವರಿಗೆ ಉಣ್ಣಲು 1 ನಲ್ಲಿ ಕಿಲೋ ಅಕ್ಕಿ ನೀಡಿದೆ. ಇದು  ಕಾಂಗ್ರೆಸ್ ಪಕ್ಷದ ಅಜೆಂಡಾ ಏನು ಎಂಬುದನ್ನು ಸೂಚಿಸುತ್ತದೆ ಎಂದು ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಪುರಭವನದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
 ಮಹಿಳಾ ಸ್ವಾವಲಂಬನೆ ಬಡವರಿಗೆ ನೆರವು ನೀಡುವುದು ನಮ್ಮ ಮುಖ್ಯ ಅಜೆಂಡ. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ ಗಾಂಧಿ ಜೀವವನ್ನೇ ತ್ಯಾಗ ಮಾಡಿದ್ದಾರೆ.
 ನೆಹರು ಬಳಿಕ ಲಾಲ್‌ಬಹುದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾರೆ. ಕೇವಲ ಗಾಂಧಿ ಕುಟುಂಬವೇ ಪ್ರಧಾನಿಯಾಗಿದೆ ಎಂಬ ಆರೋಪ ತಪ್ಪು. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಗೆದ್ದು ನಾಯಕಿಯಾಗಿದ್ದಾರೆ. ಸೋನಿಯಾ ಗಾಂಧಿಗೆ ಪ್ರಧಾನಿ ಪಟ್ಟಕ್ಕೆ ಏರುವ ಅವಕಾಶ ಇದ್ದರೂ ನಿರಾಕರಿಸುವ ಮೂಲಕ ತ್ಯಾಗ ಮೂರ್ತಿಯಾಗಿದ್ದಾರೆ.
 ಜನಾರ್ದನ ಪೂಜಾರಿ ಪ್ರಾಮಾಣಿಕ ನಾಯಕ. ತುರ್ತುಪರಿಸ್ಥಿತಿ ಸಂದರ್ಭದಲ್ಲಿಯೂ ಕಾಂಗ್ರೆಸ್ ಜತೆ ಇದ್ದ ನಿಷ್ಠಾವಂತ. ಅಂಥವರನ್ನು ಆಯ್ಕೆ ಮಾಡಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.