ರೈತರ, ಹೈನುಗಾರರ ಆಶಾಕಿರಣ ಕಾಂಗ್ರೆಸ್: ರಾಜೇಂದ್ರ ಕುಮಾರ್
ಮಂಗಳೂರು: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ರು. 122 ಕೋಟಿ ಬಿಡುಗಡೆ ಮಾಡಿ ರೈತರಿಗೆ ಆಶಾಕಿರಣವಾಗಿದೆ. ಈ ಅಂಶಗಳು ಕಾಂಗ್ರೆಸ್ ಗೆಲವಿಗೆ ನೆರವಾಗಲಿದೆ ಎಂದು ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಾಂಗ್ರೆಸ್ ಚುನಾವಣೆ ಪ್ರಚಾರ ಉಸ್ತವಾರಿ ವಹಿಸಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಡ್ಡಿ ಮನ್ನಾ ಹಿಂದಿನ ಸರ್ಕಾರ ಕೊಡುಗೆ. ಆದರೆ ಸಹಕಾರಿ ಬ್ಯಾಂಕ್ಗಳಿಗೆ ಮನ್ನಾ ಹಣವನ್ನು ವರ್ಷಗಟ್ಟಲೆ ನೀಡದೆ ನಷ್ಟದಲ್ಲಿ ಸಿಲುಕಿದ್ದವರು. ಆದರೆ ಈಗಿನ ಸರ್ಕಾರ ಬಡ್ಡಿ ಸಬ್ಸಿಡಿ ಮತ್ತು ಸಾಲ ಮನ್ನಾ ಬಾಕಿ ಹಣ ಬಿಡುಗಡೆ ಮಾಡಿದೆ. ಇದು ಸಹಕಾರಿ ರಂಗ ಮತ್ತು ರೈತರಲ್ಲಿ ಆಶಾ ಕಿರಣ ಮೂಡಿದೆ. ಹೈನುಗಾರಿಕೆ ಮಾಡುವವರಿಗೆ ಈಗ ಸಹಾಯಧನವನ್ನು ಹೆಚ್ಚಿಸಿದೆ.
ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಯಾವುದೇ ಅಲೆಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರೆ ಅವರ ಬಳಿ ಒಳ್ಳೆ ಅಂಶಗಳು ಇಲ್ಲ ಎಂದರ್ಥ. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಬಜೆಪಿ ಮುಖಂಡರ ಅಶ್ಲೀಲ ವರ್ತನೆಗಳಿಂದ ಬಿಜೆಪಿ ಆಡಳಿತ ಕಳೆದುಕೊಂಡಿತು. ಕಳೆದ ಲೋಕಸಭೆ ಚುನಾವಣೆ ನಡೆಯುವಾಗಿ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿತ್ತು ಎಂದು ಹೇಳಿದರು.
ಈ ಬಾರಿ ಜನಪ್ರಿಯ ಕಾಂಗ್ರೆಸ್ ಸರ್ಕಾರ ಇದೆ. ಕಾಂಗ್ರೆಸ್ ಈ ಬಾರಿ ಉತ್ತಮ ಸಾಧನೆ ಮಾಡಲಿದೆ. ಈ ಜಿಲ್ಲೆಯಲ್ಲಿ ಮೂವರು ಸಚಿವರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಇದು ಗೆಲವಿಗೆ ಪೂರಕವಾಗಲಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಕ್ಕರೆ ಕಾರ್ಖಾನೆ ಪುನರುತ್ಥಾನ ಮಾಡುವ ಭರವಸೆ ನೀಡಿತ್ತು. ಗೆದ್ದ ಬಳಿಕ ಪುನರುತ್ಥಾನ ಮಾಡುವುದು ಬಿಡಿ, ಸಕ್ಕರೆ ಕಾರ್ಖಾನೆಯನ್ನು ದುಬೈ ಉದ್ಯಮಿಗೆ ಮಾರಾಟ ಡೀಲ್ಕುದುರಿಸಿ 2 ಕೋಟಿ ಮುಂಗಡ ಪಡೆದುಕೊಂಡಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ 12 ಕೋಟಿ ಬಿಡುಗಡೆ ಮಾಡಿ, ರೈತರ ಬಾಕಿ ಹಣ ಕಾರ್ಮಿಕರಿಗೆ ವೇತನ ನೀಡಿದೆ. ದೇಶ ಕಟ್ಟುವವರು ಯಾರು, ದೇಶ ಮಾರುವವರು ಯಾರು ಎಂಬುದಕ್ಕೆ ಇದೇ ಉದಾಹರಣೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್. ಲೋಬೋ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಐವನ್ ಡಿಸೋಜ, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

