ದಕ್ಷಿಣ ಕನ್ನಡ

6ರಂದು ಮಂತ್ರಾಲಯ ಶ್ರೀ ಉಡುಪಿಗೆ

Published On :

ಉಡುಪಿ: ಮಂತ್ರಾಲಯದ ರಾಘವೇಂದ್ರ ಮಠದ ಪೀಠಾಧೀಪತಿಯಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ ಸುಭುಧೇಂದ್ರ ತೀರ್ಥರು 6ರಂದು ಪ್ರಥಮ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಮಿನಿ ಪರ್ಯಾಯೋತ್ಸವದಂತೆ ಸಿದ್ಧತೆಗಳಾಗುತ್ತಿವೆ.
 ಮಂತ್ರಾಲಯದ ಶ್ರೀಗಳನ್ನು ನಗರದ ಹೊರಭಾರದ ಜೋಡುಕಟ್ಟೆಯಲ್ಲಿ ಬರಮಾಡಿಕೊಂಡು ಭವ್ಯ ಮೆರವಣಿಗೆಯಲ್ಲಿ ರಥಬೀದಿಗೆ ಕರೆತರಲಾಗುವುದು. ಈ ಸಂದರ್ಭದಲ್ಲಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು ಹೆಲಿಕಾಪ್ಟರ್‌ನಲ್ಲಿ ಪುಷ್ಪವೃಷ್ಟಿ ನಡೆಸಲಿದ್ದಾರೆ.
 ಮೆರವಣಿಗೆಯಲ್ಲಿ ಮಂತ್ರಾಲಯ ಶ್ರೀಗಳನ್ನು ಭವ್ಯವಾದ ಅಲಂಕೃತ ತೆರೆದ ವಾಹನದಲ್ಲಿ ಕರೆ ತರಲಾಗುವುದು. ಮೆರವಣಿಗೆಯಲ್ಲಿ ವೇದಘೋಷ, ಮಠದ ಬಿರುದಾವಳಿ, ಆನೆಗಳೊಂದಿಗೆ, ನಾಸಿಕ್ ಬ್ಯಾಂಡ್, ಡೊಳ್ಳು ಕುಣಿತ, ತಟ್ಟಿರಾಯ, ಆನೆ, ಕುದುರೆ, ಒಂಟೆ, ಕೇರಳದ ಮಹಿಳಾ ಚಂಡೆ, ತಾಲೀಮು, ಜನಪದ ನೃತ್ಯ ತಂಡಗಳು, ನಾಗಸ್ವರ, ತಾಸೆ, ಭಜನಾ ತಂಡಗಳು, 108 ಮಂದಿ ಪುರುಷರ ಚಂಡೆ, ನಡೆಚಪ್ಪರ, ಪಾಲಕಿಗಳು ಇರುತ್ತವೆ. ಜೊತೆಗೆ ರಾಘವೇಂದ್ರ ಸ್ವಾಮಿ, ಶ್ರೀ ಕೃಷ್ಣ, ಶ್ರೀ ರಾಮ, ನರಸಿಂಹ ದೇವರು ಮುಂತಾದ ಸ್ತಬ್ಧ ಚಿತ್ರಗಳೂ ಭಾಗವಹಿಸಲಿವೆ.
 ಮಧ್ಯಾಹ್ನ 4 ಗಂಟೆಗೆ ಜೋಡುಕಟ್ಟೆಗೆ ಬರುವ ಮಂತ್ರಾಲಯ ಶ್ರೀಗಳು 6 ಗಂಟೆಗೆ ಕೃಷ್ಣಮಠ ಪ್ರವೇಶಿಸಿ ಪರ್ಯಾಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರೊಂದಿದೆ ಕೃಷ್ಣನ ದರ್ಶನಗೈಯಲ್ಲಿದ್ದಾರೆ.
 ನಂತರ ರಾಜಾಂಗಣದಲ್ಲಿ ಪರ್ಯಾಯ ಮಠದಿಂದ ಸನ್ಮಾನ, ಉಡುಪಿಯ ಜನತೆಯ ಪರವಾಗಿ ಪೌರ ಸನ್ಮಾನಗಳು ನಡೆಯಲಿವೆ. ನಂತರ 7ರಿಂದ ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಗಿರೀಶ್ ಚರ್ವಾಡ್ ಮತ್ತು ತಬ್ಲ ವಾದಕ ಯತೀನ್ ಮೋಕಾಶಿ ಅವರಿಂದ ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದೆ.
 ಈ ಬಗ್ಗೆ ಗುರುವಾರ ಕಾಣಿಯೂರು ಮಠದಲ್ಲಿ ಕಾಣಿಯೂರು ಶ್ರೀಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಮಠದ ಸ್ವಾಮೀಜಿ ಅವರ ಆಪ್ತ ಕಾರ್ಯದರ್ಶಿ ರಾಜ ಗೋಪಾಲಾಚಾರ್ಯರು ಇದ್ದರು.
 ಸಭೆಯಲ್ಲಿ ಗಣ್ಯರಾದ ಪ್ರದೀಪ್ ಕುಮಾರ್ ಕಲ್ಕೂರ, ಜಯಕರ ಶೆಟ್ಟಿ ಇಂದ್ರಾಳಿ, ಕೃಷ್ಣರಾಜ ಸರಳಾಯ, ರಂಗ ಪೈ, ಯಶಪಾಲ ಸುವರ್ಣ, ದಾಮೋದರ ಐತಾಳ, ಕೃಷ್ಣಮೂರ್ತಿ ಆಚಾರ್ಯ, ಭಾಸ್ಕರ ರಾವ್ ಕಿದಿಯೂರು ಮುಂತಾದವರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.