ದಕ್ಷಿಣ ಕನ್ನಡ

ಜುಲೈಗೆ 3 ಭಾಷೆಗಳಲ್ಲಿ 'ಹೋಂಸ್ಟೇ'

Published On :

ಮಂಗಳೂರು: ಬೆಂಗಳೂರಿನ ಮಿರಾಕಲ್ ಮೂವೀ ಮೇಕರ್ಸ್ ಮೂರು ಭಾಷೆಗಳಲ್ಲಿ ನಿರ್ಮಿಸುತ್ತಿರುವ 'ಹೋಮ್‌ಸ್ಟೇ' ಸಿನಿಮಾ ಜುಲೈನಲ್ಲಿ ತೆರೆ ಕಾರಣಲಿದೆ.
  ಏಕಕಾಲಕ್ಕೆ ಕನ್ನಡ ಮಾತ್ರವಲ್ಲ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಈ ಚಿತ್ರ ಸೆಟ್ಟೇರಲಿದೆ. ಚಿತ್ರೀಕರಣ ಕೂಡ ಒಟ್ಟಿಗೆ ನಡೆದಿದ್ದು, ಜೂನ್‌ಗೆ ಎಡಿಟಿಂಗ್ ಪೂರ್ಣವಾಗಲಿದೆ ಎಂದು ಚಿತ್ರ ಕಥೆ, ನಿರ್ಮಾಪಕ, ನಿರ್ದೇಶಕ ಸಂತೋಷ್ ಕೊಡಂಕಿರಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇದೇ ವೇಳೆ ಚಿತ್ರದ ಪೋಸ್ಟರ್‌ನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ.ಹರೀಶ್ ರೈ ಬಿಡುಗಡೆ ಮಾಡಿದರು.
  2013ರಲ್ಲಿ ಚಿತ್ರೀಕರಣ ಆರಂಭಿಸಿದ್ದು, 40 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಕೊಡಗು ಒಂದೇ ಕಡೆಯಲ್ಲಿ ಚಿತ್ರೀಕರಿಸಿದ್ದು, ಇದರಲ್ಲಿ ಎರಡು ಹಾಡುಗಳಿವೆ. ಸುಮಾರು 2.30 ಕೋಟಿ ವೆಚ್ಚದ ಈ ಚಿತ್ರದಲ್ಲಿ ಶಾಟ್ಸ್‌ಗೆ ಒತ್ತು ನೀಡಲಾಗಿದೆ ಎಂದರು.
  ತಾರಾಗಣದಲ್ಲಿ ಸಯ್ಯಾಲಿ ಭಾಗತ್, ಅಶೋಕ್ ಬಾಲಕೃಷ್ಣನ್, ಶೃತಿ, ರವಿ ಕಾಳೆ, ಕಿಶಬ್ ಶೆಟ್ಟಿ, ಜಯಶ್ರೀ ರಾಜ್,ಅರವಿಂದ, ದತ್ತಣ್ಣ ಮತ್ತಿತರರಿದ್ದಾರೆ. ಸಿನಿಮಾಟೋಗ್ರಫಿಯನ್ನು ನಂದಕಿಶೋರ್, ಹಸೀಬ್, ಎನ್.ಮುರಳೀಧರ್ ಮಾಡಿದ್ದು, ಆಶ್ಲೆ ಮಂಡೋನ್ಸಾ ಸಂಗೀತ ನಿರ್ದೇಶನ ನೀಡಿದ್ದಾರೆ. ನಿರ್ಮಾಣ ನೇತೃತ್ವವನ್ನು ಅಣಜಿ ನಾಗರಾಜ್ ವಹಿಸಿದ್ದಾರೆ.
  ಕೊಡಗಿನ ಹೋಮ್‌ಸ್ಟೇಯಲ್ಲಿ ಒಬ್ಬಂಟಿಯಾಗಿ ಒಂದು ರಾತ್ರಿ ಕಳೆದು ಮರುದಿನ ಭಾವಿ ಪತಿಗೆ ಅಚ್ಚರಿ ಮೂಡಿಸುವ ಉದ್ದೇಶ ಚಿತ್ರದ ನಾಯಕಿಯದು. ಅದಕ್ಕಾಗಿ ಹೋಮ್‌ಸ್ಟೇಗೆ ಹೋಗುತ್ತಾಳೆ. ಅಲ್ಲಿ ಒಬ್ಬಂಟಿಯಾಗಿ ರಾತ್ರಿ ಕಳೆಯುವ ಸನ್ನಿವೇಶದಲ್ಲಿ ಎದುರಿಸುವ ಆತಂಕ, ಅದರಿಂದ ಪಾರಾಗುವ ಬಗೆ, ಕೊನೆಗೂ ತನ್ನ ಭಾವಿ ಪತಿಗೆ ಅಚ್ಚರಿ ಮೂಡಿಸುತ್ತಾಳಾ ಎನ್ನುವುದೇ ಚಿತ್ರಕಥೆಯ ಸಸ್ಪೆನ್ಸ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.