ಬ್ಯಾಂಕ್ಗಳ ವಂಚನೆ ವಿರುದ್ಧ ಪಿಐಎಲ್
ಮಂಗಳೂರು: ಹಣಕಾಸು ವ್ಯವಹಾರದಲ್ಲಿ ಸಾರ್ವಜನಿಕರನ್ನು ವಂಚಿಸಿ ಕಾರ್ಯನಿರ್ವಹಿಸುವ ಹಣಕಾಸು ಸಂಸ್ಥೆಗಳ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ದೀನದಯಾಳನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಬಹುತೇಕ ಬ್ಯಾಂಕ್ಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರನ್ನು ಬೇಕಾದಂತೆ ನಡೆಸಿಕೊಳ್ಳುತ್ತಿವೆ. ಇದರ ಸ್ಪಷ್ಟ ಅರಿವು ಇಲ್ಲದ ಗ್ರಾಹಕರು ಬ್ಯಾಂಕ್ ಹೇಳಿದ್ದೇ ಪರಮ ಸತ್ಯ ಎಂದು ನಂಬುತ್ತಾರೆ. ವಾಸ್ತವದಲ್ಲಿ ಗ್ರಾಹಕರ ನಂಬಿಕೆಗೆ ದ್ರೋಹ ಎಸಗುವ ಕೃತ್ಯವನ್ನು ಬ್ಯಾಂಕ್ಗಳು ಮಾಡುತ್ತಿವೆ. ಸಾರ್ವಜನಿಕರ ಠೇವಣಿ ಮೊತ್ತವನ್ನು ಬೇಕಾಬಿಟ್ಟಿ ಬಳಕೆ ಮಾಡುತ್ತಿವೆ. ಸಾಲ ಮನ್ನಾ ಯೋಜನೆ ದುರುಪಯೋಗದ ಬಗ್ಗೆ 2008ರ ಸಿಎಜಿ ಅಡಿಟ್ ವರದಿ ಇದನ್ನು ಪುಷ್ಠೀಕರಿಸಿದೆ. ಇದಲ್ಲದೆ ಗ್ರಾಹಕರ ಸೇವೆಯನ್ನು ಸಾಕಷ್ಟು ನ್ಯೂನತೆಯನ್ನು ಹೊಂದಿದ್ದು, ತಾವು ಹೇಳಿದ್ದೇ ಅಂತಿಮ ಎಂಬಂತೆ ಬ್ಯಾಂಕ್ಗಳು ವರ್ತಿಸುತ್ತಿವೆ. ಸುಪ್ರೀಂ ಕೋರ್ಟ್ನಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು. ಇನ್ನೊಬ್ಬ ಆರ್ಟಿಐ ಕಾರ್ಯಕರ್ತ ವಾಲ್ಟರ್ ಎಲ್.ಡಿಸೋಜ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

