ಮಹಿಳೆಯರ, ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ'
ಸುಬ್ರಹ್ಮಣ್ಯ: ಮಹಿಳೆಯರ, ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ. ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ನಡೆಸುವುದಾಗಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿ ಅಧ್ಯಕ್ಷೆ ದಿವ್ಯಪ್ರಭ ಗೌಡ ಚಿಲ್ತಡ್ಕ ಹೇಳಿದರು.
ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಬಳಿಕ ಶನಿವಾರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದ ನಂತರ ದಿವ್ಯಪ್ರಭ ಪತ್ರಕರ್ತರೊಂದಿಗೆ ಮಾತನಾಡಿದರು.
ಅಪವಾದ ದೂರ: ಕಾಂಗ್ರೆಸ್ ಸುಳ್ಯ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುತ್ತಿಲ್ಲ ಎಂಬ ಅಪವಾದ ಇತ್ತು. ಆ ಅಪವಾದ ಇದೀಗ ದೂರವಾಗಿದೆ ಎಂದು ಹೇಳಿದರು.
ಭೇಟಿ ಸಂದರ್ಭ ತಾಲೂಕಿನ ಪಕ್ಷದ ಪ್ರಮುಖ ಮುಖಂಡರ ಗೈರು ಎದ್ದು ಕಾಣುತಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಆಡಂಬರದ, ವಿಜೃಂಭಣೆಯ ಸ್ವಾಗತ ನಾನು ಬಯಸುತ್ತಿಲ್ಲ. ದೇವರ ಆಶೀರ್ವಾದ ಸಾಕು. ಸರಳವಾಗಿ ಜನತೆಯೊಂದಿಗೆ ಬೆರೆತು ಕೆಲಸ ಮಾಡುತ್ತೇನೆ ಎಂದರು.
ಸುಬ್ರಹ್ಮಣ್ಯ ಶ್ರೀಗಳ ಭೇಟಿ: ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ ಅಧ್ಯಕ್ಷರು ಬಳಿಕ ಸುಬ್ರಹ್ಮಣ್ಯ ಶ್ರೀ ನರಸಿಂಹ ಮಠಕ್ಕೆ ಭೇಟಿ ನೀಡಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯ ಆಶೀರ್ವಾದ ಪಡೆದರು. ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆ ನೀಡಿ ಹರಸಿದರು.
ಗುತ್ತಿಗಾರು ಗ್ರಾಪಂ ಅಧ್ಯಕ್ಷೆ ಪ್ರಮೀಳ ಶಶಿಧರ್, ಉಪಾಧ್ಯಕ್ಷ ಸನತ್ ಮಳುಗಾಡು, ಕಾಂಗ್ರೆಸ್ ನಾಯಕರಾದ ದುರ್ಗಾದಾಸ್ ಮಲ್ಲಾರ, ಮಾಧವ ಬೆಳ್ಳಾರೆ, ಕಿರಣ ಬುಡ್ಲೆಗುತ್ತು, ಪರಶುರಾಮ ಚಿಲ್ತಡ್ಕ, ಲೀಲಾ ಮನಮೋಹನ, ವಸಂತಕುಮಾರ ಕೆದಿಲ, ಲಕ್ಷ್ಮಿ, ಸುಬ್ರಹ್ಮಣ್ಯ, ರವಿ ಪ್ರಕಾಶ್ ದೇರಪಜ್ಜನ ಮನೆ, ರವಿ ಗುಂಡಡ್ಕ, ಗೋಪಾಲ ಎಣ್ಣೆಮಜಲು,ಪೌಲ್ ಪಿರೇರಾ ಇದ್ದರು. ಬಳಿಕ ನಡುಗಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

