ಐಎಸ್ಐ ಗುರುತಿರುವ ಆಹಾರ ಪೊಟ್ಟಣಗಳನ್ನೇ ಬಳಸಿ
ಹರಿಹರ: ಗ್ರಾಹಕರು, ಐಎಸ್ಐ ಗುರುತು ಹೊಂದಿರುವ ಪೊಟ್ಟಣದಲ್ಲಿರುವ ಆಹಾರವನ್ನು ಮಾತ್ರ ಬಳಸಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಲ್. ಹನುಮಾನಾಯ್ಕ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಸುರಕ್ಷತಾ ಆಯುಕ್ತಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಕಿತಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ಆಹಾರ ಸುರಕ್ಷತಾ ಕಾಯ್ದೆ 2006ರ ಬಗ್ಗೆ ಆಹಾರ ಪದಾರ್ಥಗಳ ತಯಾರಕರು, ವಿತರಕರು ಮತ್ತು ಮಾರಾಟಗಾರರಿಗಾಗಿ ಗುರುವಾರ ನಡೆದ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಗುಣಮಟ್ಟದ ಆಹಾರ ಮಾರಾಟ ಮಾಡ ಬೇಕಾದದ್ದು ಪ್ರತಿಯೊಬ್ಬ ಮಾರಾಟಗಾರರ ಕರ್ತವ್ಯ ಎಂದರು.
ನೋಡಿ ಖರೀದಿಸಿ: ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ನಜ್ಮಾ ಮಾತನಾಡಿ, ಗ್ರಾಹಕರು ಎಚ್ಚತ್ತು ಕೊಂಡರೆ, ವ್ಯಾಪಾರಿಗಳು ಎಚ್ಚರಗೊಳ್ಳುತ್ತಾರೆ. ಪೊಟ್ಟಣ ಆಹಾರದ ಮೇಲೆ ಮುದ್ರಿತವಾಗಿರುವ ತಯಾರಿಕೆ ದಿನಾಂಕ ಮತ್ತು ಅಂತಿಮ ವಾಯಿದೆ ದಿನಾಂಕವನ್ನು ಖಚಿತಪಡಿಸಿಕೊಂಡು ಖರೀದಿ ಮಾಡಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ನಿವೃತ್ತ ಆಹಾರ ಸುರಕ್ಷತಾಧಿಕಾರಿ ಚಂದ್ರಶೇಖರ,ಬಾದಾಮಿ ಕಲಬೆರಕೆ ಅಥವಾ ಕಳಪೆ ಗುಣಮಟ್ಟದ ಆಹಾರ ತಯಾರಿಸುವ, ಪೂರೈಕೆ ಮಾಡುವ, ವಿತರಣೆ ಮಾಡುವ ಹಾಗೂ ಮಾರಾಟ ಮಾಡುವ ಎಲ್ಲರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಅಂಕಿತ ಅಧಿಕಾರಿ ಡಾ.ಜೆ.ಎಂ. ಸರೋಜಾಬಾಯಿ ಅಧ್ಯಕ್ಷತೆ ವಹಿಸಿದ್ದರು. ಹರಿಹರ ಛೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ ವಾಣಿಜ್ಯೋದ್ಯಮಿ ಎಚ್. ವಿಶ್ವನಾಥ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಪ್ರಭುಗೌಡ ಬಿ. ಪಾಟೀಲ್, ಡಾ.ಶಿಲ್ಪಾ, ಜಿಲ್ಲಾ ಆಹಾರ ಸುರಕ್ಷಾಧಿಕಾರಿ ಕೊಟ್ರೇಶ್, ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಎಚ್.ಎಸ್. ರಾಘವೇಂದ್ರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

