ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಬಡವರು, ಮಧ್ಯಮ ವರ್ಗದ ಜನರಿಗೆ ನಿವೇಶನ ಸಿಗದಂತೆ ಮಾಡಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡ ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಬಂಡವಾಳಶಾಹಿಗಳ ವಿರುದ್ಧ ಶ್ರೀರಾಮ ಸೇನೆಯು ಹೋರಾಟ ನಡೆಸಿದೆಯೇ ಹೊರತು, ಯಾವುದೇ ಬಡ ಜನರು, ಪತ್ರಕರ್ತರ ವಿರುದ್ಧ ಅಲ್ಲ ಎಂದು ಶ್ರೀರಾಮ ಸೇನೆ ಸಂಘಟನೆ ಸ್ಪಷ್ಟಪಡಿಸಿದೆ.
ಶಾಬನೂರು ಗ್ರಾಮದ ಜೆ.ಎಚ್. ಪಟೇಲ್ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅಧಿಕಾರಸ್ಥ ರಾಜಕಾರಣಿ, ಬಂಡವಾಳ ಶಾಹಿಗಳು, ಪ್ರಭಾವಿಗಳಿಗೆ ನಿವೇಶನಗಳು ಹಂಚಿಕೆಯಾಗಿವೆ. ಈ ಬಗ್ಗೆ ಶ್ರೀರಾಮ ಸೇನೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕಲೆ ಹಾಕಿ, ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದೆ ಎಂದು ಸೇನೆಯು ಹೇಳಿದೆ.
ಹೋರಾಟ ಮುಂದುವರಿಯಲಿದೆ; ಸರ್ಕಾರ ಹಂಚುವ ನಿವೇಶನಗಳು ಅರ್ಹ ಜನರಿಗೆ ತಲುಪಬೇಕು ಎಂಬುದು ಸೇನೆ ಉದ್ದೇಶ. ಆದರೆ, ಭ್ರಷ್ಟ ರಾಜಕಾರಣಿಗಳ ಬಂಧುಗಳ, ಬಂಡವಾಳಶಾಹಿಗಳಿಗೆ ನಿವೇಶನ ಹಂಚಿದ ದೂಡಾ ವಿರುದ್ಧ ಮೊದಲಿಗೆ ಹೋರಾಟ ಆರಂಭಿಸಿದ ಶ್ರೀರಾಮ ಸೇನೆ ಇದರಲ್ಲಿ ಯಾವುದೇ ರಾಜಿ ಇಲ್ಲದೆ, ಹಗರಣಕ್ಕೆ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಡೆಸಲಿದೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸೇನೆ ತಿಳಿಸಿದೆ.
ಆಡಳಿತಕ್ಕೆ ಬಂದ ಜನಪ್ರತಿನಿಧಿಗಳು ಜನ ಪರ ಕೆಲಸ ಮಾಡಲಿ ಎಂಬುದನ್ನು ಚುನಾವಣೆಯಲ್ಲಿ ಮತದಾರರು ತೋರಿಸಿಕೊಟ್ಟಿದ್ದಾರೆ ಎಂದು ಸೇನೆಯ ಕೆ. ಮಣಿಕಂಠ, ಪರಶುರಾಮ ನಡುಮನಿ, ಆನಂದ ಜ್ಯೋತಿ, ರಾಜೇಶ ಇತರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

