ದಾವಣಗೆರೆ

ಸೈಕಲ್ ಜಾಥಾದ ಯಮನಪ್ಪಗೆ ಬೀಳ್ಕೊಡುಗೆ

Published On :

ಕಪ್ರ ವಾರ್ತೆ, ದಾವಣಗೆರೆ
ದೇಶದ ಮತದಾರರಲ್ಲಿ ಮತ ಹಕ್ಕು ಚಲಾವಣೆಯ ಮಹತ್ವ ಸಾರುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾ. ಹಂಗರಗಿ ಗ್ರಾಮದಿಂದ ಬೆಂಗಳೂರಿಗೆ ಸೈಕಲ್ ಜಾಥಾ ಕೈಗೊಂಡಿರುವ ಹಂಗರಗಿ ಗ್ರಾಮದ 75 ವರ್ಷದ ಯಮನಪ್ಪ ಪರಸನ್ನಗೆ ನಗರದಲ್ಲಿ ಶಾಸಕ, ಕೆಪಿಸಿಸಿ ಖಜಾಂಚಿ ಡಾ. ಶಾಮನೂರು ಶಿವಶಂಕರಪ್ಪ ಸ್ವಾಗತಿಸಿ, ಬೀಳ್ಕೊಟ್ಟರು.
 ನಗರದ ತಮ್ಮ ನಿವಾಸಕ್ಕೆ ಆಗಮಿಸಿದ ಸೈಕಲ್ ಸವಾರ ಯಮನಪ್ಪಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಇಳಿಯ ವಯಸ್ಸಿನಲ್ಲಿ ಉತ್ತರ ಕರ್ನಾಟಕದ ಬಾದಾಮಿ ತಾಲೂಕಿನಿಂದ ಹಳೆ ಮೈಸೂರು ಭಾಗದ ಬೆಂಗಳೂರಿಗೆ ಸೈಕಲ್ ಜಾಥಾವನ್ನು ತನ್ನ 75ರ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಸಾಗಿರುವ ಯಮುನಪ್ಪ ಮಾದರಿಯಾಗಿದ್ದಾರೆ ಎಂದರು.
ಶುಭ ಹಾರೈಕೆ: ಸುಮಾರು 127 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಸಾಧನೆ ಬಗ್ಗೆ ಜನರಿಗೆ ತಿಳಿಸಲು, ಮತ ಚಲಾವಣೆಯ ಮಹತ್ವ ಸಾರಲು ಹೊರಟ ಯಮುನಪ್ಪಗೆ ಶುಭವಾಗಲಿ ಎಂದು ಅವರು ಹಾರೈಸಿದರು.
ಬಾಪೂಜಿ ವಿದ್ಯಾಸಂಸ್ಥೆ ಖಜಾಂಚಿ ಎ.ಸಿ. ಜಯಣ್ಣ, ಯುವಕ ಸಂಘದ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಸದಸ್ಯ ಸೋಮಲಾಪುರ ಹನುಮಂತಪ್ಪ, ಅಜ್ಜಯ್ಯ ಲಕ್ಕಪ್ಪ ಮತ್ತಿತರರು ಬೀಳ್ಕೊಟ್ಟರು. ಬಾದಾಮಿ ತಾಲೂಕಿನಿಂದ ಬೆಂಗಳೂರು ವರೆಗಿನ ಸುಮಾರು 575 ಕಿ.ಮೀ. ದೂರವನ್ನು ಸೈಕಲ್ ಜಾಥಾ ಮೂಲಕ ಯಮುನಪ್ಪ ಸಾಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.