ರಘು ಕೊಲೆ: ಆರೋಪಿಗಳಿಗಾಗಿ ಶೋಧ
ನವಲಗುಂದ: ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಸೋಮವಾರ ರಾತ್ರಿ ಬಸ್ ನಿಲ್ದಾಣದ ಬಳಿ ಯುವಕ ರಘು ಬಡಿಗೇರ (25) ಎಂಬಾತನನ್ನು ಬರ್ಬರವಾಗಿ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದು, ಕೊಲೆಗೀಡಾದ ಯುವಕನ ತಂದೆ ವೆಂಕಪ್ಪ ಬಡಿಗೇರ 9 ಆರೋಪಿಗಳ ವಿರುದ್ದ ನವಲಗುಂದ ಪೊಲೀಸ್ ಠಾಣಿಯಲ್ಲಿ ದೂರುದಾಖಲಿಸಿದ್ದಾರೆ.
ಕೊಲೆ ಆರೋಪಿಗಳಾದ ವೆಂಕರಡ್ಡಿ ಕೋನರಡ್ಡಿ(31), ಸುರೇಶ ಕೋನರಡ್ಡಿ(45) ಅಶೋಕ ಕೋನರಡ್ಡಿ(46) ಹನುಮರಡ್ಡಿ ಕೋನರಡ್ಡಿ(55), ಜಗ್ಗು ಕೋನರಡ್ಡಿ(26), ಮಂಜುನಾಥ ಕೋನರಡ್ಡಿ (24), ಇವರೆಲ್ಲರೂ ಕೊಲೆ ಮಾಡಿದ ಆರೋಪಿತರಾಗಿದ್ದರೆ ಎನ್ನಲಾಗಿದೆ.
ಭೀಮರಡ್ಡಿ ಕೋನರಡ್ಡಿ(67), ವಿಲಾಸರಡ್ಡಿ ಕೋನರಡ್ಡಿ(55) ಹಾಗೂ ಮುತ್ತಪ್ಪ ಕೋನರಡ್ಡಿ(30) ಕೊಲೆಗೆ ಪ್ರಚೋದನೆ ನೀಡಿದ ಆರೋಪಿತರೆಂದು ದೂರು ದಾಖಲಿಸಲಾಗಿದೆ. ಸಿಪಿಐ ರಾಮನಗೌಡ ಹಟ್ಟಿ ಹಾಗೂ ಪಿಎಸ್ಐ ಎನ್.ಸಿ. ಕಾಡದೇವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ವ್ಯಾಪಕ ಜಾಲ ಬೀಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದೆಂದು ಸಿಪಿಐ ರಾಮನಗೌಡ ಹಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

