ಕ್ಷೇತ್ರವನ್ನು ಹಸಿರಾಗಿಸುವೆ: ನಿಂಬಣ್ಣವರ್
ಕಲಘಟಗಿ: ಕ್ಷೇತ್ರವನ್ನು ಸಮಗ್ರ ನೀರಾವರಿಗೆ ಒಳಪಡಿಸಿ ರೈತರ ಬಾಳನ್ನು ಹಸನಾಗಿಸುವ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿ ಸಂಪೂರ್ಣ ಹಸಿರನ್ನಾಗಿಸುವ ತಮ್ಮ ಪ್ರಯತ್ನಕ್ಕೆ ಮತದಾರರು ಆಶೀರ್ವದಿಸಬೇಕು ಎಂದು ಕೆಜೆಪಿ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ ಮನವಿ ಮಾಡಿದರು.
ಅವರು ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿ, ಈಚೆಗೆ ಗ್ರಾಮದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿರುವುದಲ್ಲದೆ, ಸಭೆಗಳನ್ನು ನಡೆಸಿ ತಮಗೆ ಮತ ನೀಡುವುದರೊಂದಿಗೆ ರೈತಪರ ನೀಲುವನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಬಲ ಪಡಿಸಬೇಕೆಂದು ವಿನಂತಿಸಿದರು.
ಅಶೋಕ ಗುಮ್ಮಗೋಳ, ನಾಗಪ್ಪ ಕಲ್ಲೂರ, ಬಸಯ್ಯ ಹಿರೇಮಠ ಮಾನಪ್ಪ ಬಾನವಾನವರ, ಡಾ. ಓಂಕಾರ, ಬಸಪ್ಪ ಭಜಂತ್ರಿ, ಸಾಧಿಕ್ ಹೆಬ್ಬಾಳ, ಡಾ. ರೆಡ್ಡಿ, ಗೀತಾ ಮರಲಿಂಗಣ್ಣವರ, ಶಕುಂತಲಾ ನಾಡಗೌಡ, ಮಲ್ಲೇಶ ಜಾವೂರ, ಯಲ್ಲಾರಿ ಶಿಂಧೆ, ಶೇಖಪ್ಪ ಹುಲಗೂರ, ಚಂದ್ರಗೌಡ ಪಾಟೀಲ, ಪರಶುರಾಮ ರಜಪೂತ, ಸದಾನಂದ ಚಿಂತಾಮಣಿ, ಗಣಪತಿ ಮೋತೆನವರ, ಎಸ್.ಟಿ. ತೆಗ್ಗಿಹಳ್ಳಿ ಇತರರು ಇದ್ದರು.
ಅಷ್ಟಗಿ ಬಿರುಸಿನ ಪ್ರಚಾರ
ಧಾರವಾಡ: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಭ್ಯರ್ಥಿ ತವನಪ್ಪ ಅಷ್ಟಗಿ ನಗರದ ವಾರ್ಡ್ ನಂ. 4 ಮತ್ತು 5ರಲ್ಲಿ ಭಾನುವಾರ ಪಾದಯಾತ್ರೆ ನಡೆಸಿ ಬಿರುಸಿನ ಪ್ರಚಾರ ಕೈಗೊಂಡಿದ್ದರು. ವಾರ್ಡ್‌ನ ವಿವಿಧ ಕಾಲನಿಗಳಲ್ಲಿ ಮನೆ ಮನೆಗೆ ತೆರಳಿ ಅಷ್ಟಗಿ ಮತ ಯಾಚಿಸಿದರು. ವಾರ್ಡ್‌ನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹಲವಾರು ಭರವಸೆಗಳನ್ನು ನೀಡುತ್ತಾ ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತ ನೀಡಬೇಕು ಮತದಾರರನ್ನು ಮನವಿ ಮಾಡಿಕೊಂಡರು. ವಿನೋದ ಕುಸುಗಲ್ಲ, ಶಿವಾನಂದ ಹಂಜಿ, ರಮೇಶ ಹೂಗಾರ, ವೀರೇಶ ಮದ್ನೂರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

