ಇಂದು ಪ್ರಾತ್ಯಕ್ಷಿಕೆ (ಸುದ್ದಿ ಸಂಕ್ಷೇಪ)
ಅಣ್ಣಿಗೇರಿ: ಭೂಮಿಗೆ ಜೀವ ಕೊಡುವ ನಡುಕಟ್ಟಿನ ಮಷಿನ್ನಿನ ಪ್ರಾತ್ಯಕ್ಷಿಕೆ ಮತ್ತು ವಿಚಾರ ಸಂಕಿರಣ ಏ.20ರ ಸಂಜೆ 4ಕ್ಕೆ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ ಹೊರಕೇರಿ ಓಣಿ ಅಣ್ಣಿಗೇರಿಯಲ್ಲಿ ಜರುಗಲಿದೆ. ಗದಗ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬೆಂಗಳೂರು ಕೃಷಿ ಮಿಷನ್ ಅಧ್ಯಕ್ಷರಾದ ಡಾ.ಎಸ್.ಎ. ಪಾಟೀಲ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಆರ್. ಹಂಚಿನಾಳ, ಕೃ.ವಿ.ವಿ. ಧಾರವಾಡ ಶಿಕ್ಷಣ ನಿರ್ದೇಶಕ ಮಹದೇವ ಬ. ಚಿಟ್ಟಿ, ಧಾರವಾಡ ಕೃ.ವಿ.ವಿ. ಸಂಶೋಧನಾ ನಿರ್ದೇಶಕ ಡಾ. ಬಸವರಾಜ ಎಂ. ಖಾದಿ, ಧಾರವಾಡ ಎ.ಜಿ.ಎಂ. ನಬಾರ್ಡ್ ಆಫೀಸರ್ ವೈ.ಎನ್. ಮಹಾದೇವಯ್ಯಾ, ಹುಬ್ಬಳ್ಳಿ ಕೆ.ಯು.ಐ.ಡಿ.ಎಪ್.ಸಿ. ಉಪಯೋಜನಾ ನಿರ್ದೇಶಕರಾದ ಎಸ್.ಆರ್. ಗಾಯಕವಾಡ ಸಾಹೇಬರು, ನಿಂಗಮ್ಮ ಹೂಗಾರ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ, ಷಣ್ಮುಖ ಗುರಿಕಾರ, ಈಶ್ವರಪ್ಪ ಉಳ್ಳಾಗಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಟ್ಟಣದ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಮಾಹಿತಿ ಪಡೆಯಬೇಕೆಂದು ಆಯೋಜಕ ಎ.ಐ. ನಡಕಟ್ಟಿನ ವಿನಂತಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ
ನವಲಗುಂದ: ತಾಲೂಕಿನ ವಿವಿಧ ಗ್ರಾಮಗಳ ಬಿಎಸ್ಸಾರ್ ಕಾಂಗ್ರೆಸ್ನ ನೂರಾರು ಕಾರ್ಯಕರ್ತರು ಶುಕ್ರವಾರ ಧುರೀಣರಾದ ಎಂ.ಎಸ್. ಕರಿ, ಮೋಹನ ಗುಡಸಲಮನಿ ಹಾಗೂ ಕುಮಾರಗೌಡ ಸಿದ್ದಾಪುರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ತಾಪಂ ಸದಸ್ಯ ಚನ್ನಬಸವ ಪಡೇಸೂರ, ಎಪಿಎಂಸಿ ಸದಸ್ಯ ಪ್ರಕಾಶ ಅಂಗಡಿ, ಆರ್.ಎಂ. ಸರನಾಡಗೌಡ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

