ಧಾರವಾಡ

ಸಂಶೋಧನೆಗಾಗಿ ವಿದೇಶಕ್ಕೆ (ಸುದ್ದಿ ಸಂಕ್ಷೇಪ

Published On :

ಧಾರವಾಡ: ಇಲ್ಲಿನ ಜೆಎಸ್ಸೆಸ್ ಬನಶಂಕರಿ ಕಾಲೇಜು ಮತ್ತು ಎಸ್.ಕೆ. ಗುಬ್ಬಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಕಾಂತ ಕುಲಕರ್ಣಿ ಅವರು ಇಂಡೋ ಹಂಗೇರಿಯನ್ ಎಜುಕೇಶನ್ ಎಕ್ಸ್‌ಚೆಂಜ್ ಯೋಜನೆಯಡಿಯಲ್ಲಿ ಹೆಚ್ಚಿನ ಸಂಶೋಧನೆಗಾಗಿ ವಿದೇಶ ಪ್ರಯಾಣಕ್ಕೆ ಆಯ್ಕೆಯಾಗಿದ್ದಾರೆ. ಹಂಗೇರಿ ದೇಶದ ಬುಡಾಫೇಸ್ಟ್, ತಾಂತ್ರಿಕ ಹಾಗೂ ಅರ್ಥಶಾಸ್ತ್ರ ವಿವಿ ರಸಾಯನಶಾಸ್ತ್ರದ ಅಭಿಯಾಂತ್ರಿಕ ಹಾಗೂ ಪರಿಸರ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆಗೆ ಇವರು ಹೊರಟಿದ್ದಾರೆ. ಏ. 24ರಂದು ಮುಂಬೈನಿಂದ ಯೂರೋಪ್ ಖಂಡದ ಬುಡಾಫೇಸ್ಟ್‌ನ ಹಂಗೇರಿ ದೇಶಕ್ಕೆ ಪ್ರಯಾಣ ಬೆಳಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪರಿಸರ ರಕ್ಷಿಸಲು ಮನವಿ
ಧಾರವಾಡ: ನಾಗರಿಕತೆ ಹೆಸರಿನಲ್ಲಿ ನಾಶವಾಗುತ್ತಿರುವ ಪರಿಸರವನ್ನು ರಕ್ಷಿಸುವುದು ಇಂದಿನ ಯುವಜನತೆಯ ಕರ್ತವ್ಯವಾಗಬೇಕೆಂದು ರಾಜ್ಯ ಗಣಿತ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಎಸ್. ಮನ್ನಿಕೇರಿ ಹೇಳಿದರು.  ಇಲ್ಲಿನ ನಾಗರಿಕ ಪರಿಸರ ಸಮಿತಿ ಮತ್ತು ಅಣ್ಣಿಗೇರಿ ಸೇವಾ ಟ್ರಸ್ಟ್ ಜಂಟಿಯಾಗಿ ಸಪ್ತಾಪುರದಲ್ಲಿ ಏರ್ಪಡಿಸಿದ್ದ ವಿಶ್ವಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯ ವಿಕಾಸದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿವಳಿಕೆ ಇರಬೇಕು ಎಂದರು. ಅಣ್ಣಿಗೇರಿ ಸೇವಾ ಪ್ರೊ. ಎನ್.ವೈ. ಅಣ್ಣಿಗೇರಿ ಹಾಗೂ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ವಿ.ಸಿ. ಸವಡಿ, ಪಂಡಿತ ಮುಂಜಿ, ಶಶಿಧರ್ ಪಾಟೀಲ ಇದ್ದರು. ಪ್ರೊ. ಆರೇಶ್ವರ ಮೇಟಿ ಸ್ವಾಗತಿಸಿದರು. ಪ್ರೊ. ಬಸವರಾಜ ಉಡಕೇರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.