ಖಾದಿ ಸಂಘದ ನೌಕರರ ಮಕ್ಕಳ ಶಿಕ್ಷಣಕ್ಕೆ ನೆರವು
ಹುಬ್ಬಳ್ಳಿ: ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಖಾದಿ ಕಾರ್ಯಕರ್ತರ, ನೂಲುಗರ, ನೌಕರರ ಮಕ್ಕಳ ಉನ್ನ್ನತ ಶಿಕ್ಷಣದ ವೆಚ್ಚ ಭರಿಸಲಾಗುವುದು ಎಂದು ಉದ್ಯಮಿ ಬಸಂತಕುಮಾರ ಪಾಟೀಲ ಹೇಳಿದರು.
ಗುರುವಾರ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಆವರಣದಲ್ಲಿ ಜರುಗಿದ ವೆಂಕಟೇಶ ಮಾಗಡಿ ಅವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಸ್ಥಾಪಕ ವೆಂಕಟೇಶ ಮಾಗಡಿ ಅವರ ಕಂಚಿನ ಪುತ್ಥಳಿಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗುವುದು. ಈಗಾಗಲೇ ಬಿಜಾಪುರದಲ್ಲಿ ಟಿ.ಕೆ. ಪಾಟೀಲ ಚಾರಿಟೆಬಲ್ ಟ್ರಸ್ಟ್ ಮೂಲಕ ಐದು ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಹಾಗೆಯೇ ಫೆಡರೇಷನ್ ಕಾರ್ಯಕರ್ತರ ಮಕ್ಕಳಿಗೂ ಈ ಸೌಲಭ್ಯ ವಿಸ್ತರಿಸಲಾಗುವುದು. ವೆಂಕಟೇಶ ಮಾಗಡಿ ಟ್ರಸ್ಟ್ ಮೂಲಕ ಡಾ. ಪಾಟೀಲ ಪುಟ್ಟಪ್ಪ ಅವರ ಮಾರ್ಗದರ್ಶನದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟಿನ ಕಾರ್ಯಾಧ್ಯಕ್ಷರೂ ಆಗಿರುವ ಬಸಂತಕುಮಾರ ಪಾಟೀಲ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ದೇಶದ ಏಕೈಕ ಈ ಖಾದಿ ಫೆಡರೇಷ್ನ್ನ್ನು ದೇಶದ ಮಾದರಿ ಫೆಡರೇಷನ್ ಮಾಡಲಾಗುವುದು ಎಂದರು.
ಉದ್ಯಮಿ ಮದನ ದೇಸಾಯಿ, ಪ್ರೊ. ಐ.ಜಿ. ಸನದಿ, ಹುದಲಿ ಖಾದಿ ಸಂಘದ ಚೇರ್ಮನ್ ಗ.ಮೂ. ಮಾಳಗಿ. ಫೆಡರೇಷನ್ ಅಧ್ಯಕ್ಷ ಕೆ.ವಿ. ಪತ್ತಾರ, ಉಪಾಧ್ಯಕ್ಷ ವಿ.ಜಿ. ಮತ್ತಿಕೊಪ್ಪ, ಅಕ್ಕಮಹಾದೇವಿ ಮಾಗಡಿ, ನಿವೃತ್ತ ಡಿಡಿಪಿಐ ಬಿ.ಟಿ. ಬೆಟಗೇರಿ, ಮತ್ತು ಕೆ.ಟಿ. ಪಾಟೀಲ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಸಲಹಾ ಸಮಿತಿ ಸಂಚಾಲಕ ಉಮೇಶ ಬಳಿಗಾರ, ಸರ್ಕಾರ ನೀಡಿದ ರಾಷ್ಟ್ರಧ್ವಜ ಘಟಕದ ನವೀಕರಣ ಹಾಗೂ ಗದ್ದನಕೇರಿ ಕಲ್ಯಾಣ ಮಂಟಪದ ಶಂಕುಸ್ಥಾಪನೆ ಅ. 2ರಂದು ನೆರವೇರಿಸಲು ಸಿದ್ಧತೆ ನಡೆದಿದೆ ಎಂದರು.
ಫೆಡರೇಷನ್ ಕಾರ್ಯದರ್ಶಿ ಎಚ್.ಎನ್. ಅಂಟಿನ ಸ್ವಾಗತಿಸಿ ನಿರೂಪಿಸಿದರು. ಸದಸ್ಯರಾದ ಆರ್.ವೈ. ಹೂಗಾರ, ಎಂ.ಜಿ. ಯಾದವಾಡ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಶಿವಾ ನಾಯ್ಕ, ಸುಂದರವ್ವ ಪಾಟೀಲ, ಸುರೇಶ ಮಾಗಡಿ, ಪ್ರೇಮಣ್ಣ ಪಾಟೀಲ, ಡಾ. ಲಕ್ಷ್ಮಿಬಾಯಿ ಪಾಟೀಲ, ರವಿ ಪಾಟೀಲ, ಚ.ಬ. ಭದ್ರಕಾಳಿ, ಮಹಾಂತೇಶ ಮತ್ತಿಕೊಪ್ಪ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

