ಧಾರವಾಡ

ಇಂದು ಉಪನ್ಯಾಸ

Published On :

ಧಾರವಾಡ: ಇಲ್ಲಿಯ ದಿಗಂಬರ ಜೈನ್ ಟ್ರಸ್ಟ್, ಧಾರವಾಡದ ಜೈನ ಮಿಲನ್ಗಳು, ಸಮ್ಯಕ್ಪ್ರಜ್ಞಾ ಮಹಿಳಾ ಮಂಡಳ, ಸನ್ಮತಿ ಸೇವಾ ಸಮಾಜ ಹಾಗೂ ಪೆರ್ಮಾಣು ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಆ. 3ರಂದು ಸಂಜೆ 6ಕ್ಕೆ ಬಾಲ ಬ್ರಹ್ಮಚಾರಿ ಸೋಮದೇವ ಸೂರಿ ಬೈಯ್ಯಾಜಿ ಅವರು ಚಾತುರ್ಮಾಸ್ಯದ ನಿಮಿತ್ತ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜೈನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ತಿಳಿಸಿದ್ದಾರೆ.
ವಾಹನ ಡಿಕ್ಕಿ: ಸಾವು
ಹುಬ್ಬಳ್ಳಿ: ವೇಗದಿಂದ ಬರುತ್ತಿದ್ದ ಟಾಟಾ ಸುಮೋ ವಾಹನವೊಂದು ಶುಕ್ರವಾರ ಬಿಡ್ನಾಳ ಕ್ರಾಸ್ ಬಳಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತಪಟ್ಟ ಮಹಿಳೆಯನ್ನು ಸೋನಿಯಾ ಗಾಂಧಿ ನಗರದ ನೂರಜಹಾನ್ ಮಹಬೂಬ್ಸಾಬ್ ಹುರಕಡ್ಲಿ ಎಂದು ಗುರುತಿಸಲಾಗಿದೆ. ಗಬ್ಬೂರಿನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಟಾಟಾ ಸುಮೋ ಚಾಲಕ ವಾಹನವೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆ ಬದಿ ನಿಂತಿದ್ದ ನೂರ್ಜಹಾನ್ ಅವರಿಗೆ ಹಾಯಿಸಿ ವಾಹನ ಸಮೇತ ಪರಾರಿಯಾಗಿದ್ದಾನೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ ಮಳಿಮಠ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕೆಎಲ್ಇ ಸಂಸ್ಥೆಗಳ ಆಜೀವ ಸದಸ್ಯರಾಗಿದ್ದ ಹಾಗೂ ಹಿರಿಯ ನ್ಯಾಯವಾದಿ ಚಂದ್ರಶೇಖರ ಮಳಿಮಠ (78) ಗುರುವಾರ ನಿಧನ ಹೊಂದಿದರು. ಸಾಹಿತ್ಯಾಸಕ್ತರೂ ಆಗಿದ್ದ ಅವರು ಅನೇಕ ಸಂಘ, ಸಂಸ್ಥೆಗಳ ಸದಸ್ಯರಾಗಿ, ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಜನಮನದಲ್ಲಿ ವಿಶೇಷ ಸ್ಥಾನ ಹೊಂದಿದ್ದರು. ಮೃತರಿಗೆ ಪುತ್ರ ಕಲಾವಿದ ಹಾಗೂ ಆಕಾಶವಾಣಿ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ, ಪುತ್ರಿ ಕಲಾವಿದೆ ವಿಜಯಲಕ್ಷ್ಮಿ ಮಳಿಮಠ ಮತ್ತು ಪತ್ನಿ ಪಾರ್ವತಿದೇವಿ ಇದ್ದಾರೆ. ಇವರ ಅಗಲಿಕೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಬಂಡುರಾವ್ ಕುಲಕರ್ಣಿ
ಧಾರವಾಡ: ಮಾಳಮಡ್ಡಿ ಉಳವಿ ಬಸವೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ ಬಂಡುರಾವ್ ಹನುಮಂತರಾವ್ ಕುಲಕರ್ಣಿ (84) ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಅಪಾರ ಬಂಧುಗಳು ಇದ್ದಾರೆ.
ಸಂಕಮ್ಮ ಭಾವಿಕಟ್ಟಿ
ಧಾರವಾಡ: ಇಲ್ಲಿಯ ಮಂಗಳವಾರಪೇಟೆಯ ಮೆಣಸಿನಕಾಯಿ ಓಣಿಯ ನಿವಾಸಿಯಾಗಿದ್ದ ಸಂಕಮ್ಮ ಭಾವಿಕಟ್ಟಿ (70) ಶುಕ್ರವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.