ಅಂತ್ಯೋದಯಕ್ಕೆ ಅಕ್ಕರೆ ಯಾರಿಗೂ ಇಲ್ಲ ಸಕ್ಕರೆ
ಕನ್ನಡಪ್ರಭ ವಾರ್ತೆ, ಉಪ್ಪಿನ ಬೆಟಗೇರಿ(ಧಾರವಾಡ) ಆ. 4
ಅನ್ನಭಾಗ್ಯ ಯೋಜನೆ ಸಾಕಷ್ಟು ತೊಡರುಗಳನ್ನು ಎದುರಿಸಿ ಆರಂಭವಾಯಿತು. ಆದರೆ, ಈ ಯೋಜನೆ ಅಂತ್ಯೋದಯ ಪಡಿತರ ಚೀಟಿಗೆ ಸಂತೃಪ್ತಿ ನೀಡಿ, ಮತ್ತೊಂದು ಕಡೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಸೌಲಭ್ಯ ಕಿತ್ತುಕೊಂಡಿದೆ. ಹೌದು, ದಿನ ಬಳಕೆ ಧಾನ್ಯಗಳು ಹಾಗೂ ವಸ್ತುಗಳ ಬೆಲೆ ಇದೀಗ ಗಗನಕ್ಕೇರಿರುವ ಸಂದರ್ಭದಲ್ಲಿ ಸಕ್ಕರೆ ಮತ್ತು ಗೋದಿಯನ್ನು ಸಾರ್ವಜನಿಕ ಪಡಿತರ ವಿರತಣಾ ವ್ಯವಸ್ಥೆಯಿಂದ ಸರ್ಕಾರ ಕೈಬಿಟ್ಟಿದೆ. ಇದರಿಂದಾಗಿ ಬಿಪಿಎಲ್ ಕಾರ್ಡ್ದಾರರಿಗೆ ಸಕ್ಕರೆ ಮತ್ತು ಗೋದಿ ಖರೀದಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಚುನಾವಣಾ ಪ್ರಣಾಳಿಕೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ, ಪ್ರತಿ ಕೆಜಿ ಅಕ್ಕಿಗೆ ರು. 1ರಂತೆ ಬಡತನ ರೇಖೆಗಿಂತ ಕೆಳಗಿನ ಒಬ್ಬರೇ ಸದಸ್ಯರಿರುವ ಬಿಪಿಎಲ್ ಕಾರ್ಡಿಗೆ 10 ಕೆಜಿ ಅಕ್ಕಿ, ದ್ವಿಸದಸ್ಯ ಕುಟುಂಬಕ್ಕೆ 20 ಕೆಜಿ ಅಕ್ಕಿ ಹಾಗೂ ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 30 ಕೆಜಿ ಅಕ್ಕಿಯನ್ನು ಮಾತ್ರ ವಿತರಿಸಲು ಮಾನ್ಯತೆ ನೀಡಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಿಂದಾಗಿ ಬಿಪಿಎಲ್ ಕಾರ್ಡ್ದಾರರಿಗೆ ಈ ಹಿಂದೆ ಪಡಿತರದಲ್ಲಿ ನೀಡುತ್ತಿದ್ದ ಗೋದಿ, ಸಕ್ಕರೆ ಸದ್ಯ ಸ್ಥಗಿತಗೊಳಿಸಿದೆ. ಆದರೆ, ಅಂತ್ಯೋದಯ ಕಾರ್ಡ್ಗಳಿಗೆ ಗೋದಿ ನೀಡುವ ಮೂಲಕ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹೇಳದೇ ಕೇಳದೇ ಸಕ್ಕರೆ ಮತ್ತು ಗೋದಿಯ ಪಡಿತರ ವಿತರಣಾ ವ್ಯವಸ್ಥೆಯಿಂದ ಕೈ ಬಿಟ್ಟಿದೆ. ಇದರಿಂದಾಗಿ ಬಡತನ ರೇಖೆಗಿಂತ ಕೆಳಗಿನ ಜನತೆ ಪಡಿತರಕ್ಕಾಗಿ ಗೋಳಾಡುವಂತಾಗಿದೆ. ಗೋದಿ ಮತ್ತು ಸಕ್ಕರೆ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಆದರೆ, ಸಕ್ಕರೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಿಂದ ಸ್ಥಗಿತಗೊಳಿಸಿರುವುದು ರಾಜ್ಯದ ಹಿಂದುಳಿದ, ಬಡ ಜನರಿಗೆ ಸಕ್ಕರೆ ಮತ್ತು ಗೋದಿ ಖರೀದಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಪುನಃ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ಗಳಿಗೆ ಸಕ್ಕರೆ ಹಾಗೂ ಗೋದಿಯನ್ನು ಪಡಿತರ ವಿತರಣಾ ವ್ಯವಸ್ಥೆಗೆ ಅಳವಡಿಸಬೇಕೆಂಬುದು ಬಡ ಜನರ ಅಭಿಲಾಷೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

