ಬಣ್ಣದ ಗಣೇಶ ಮೂರ್ತಿಗಳಿಂದ ಜಲಚರಕ್ಕೆ ಹಾನಿ: ಸಿಂಧೂರ
ಕನ್ನಡಪ್ರಭ ವಾರ್ತೆ, ಧಾರವಾಡ, ಆ. 9
ಪರಿಸರದಲ್ಲಿ ಎಲ್ಲ ಜೀವಿಗಳಿಗೆ ಬದುಕುವ ಹಕ್ಕಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಿದ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಅಪಾರ ಪ್ರಮಾಣದ ಜಲಜೀವರಾಶಿಗೆ ನಾವು ಅನ್ಯಾಯ ಎಸಗುತ್ತಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಪರಿಸರ ಪ್ರೇಮಿ ರಾಜಶೇಖರ ಸಿಂಧೂರ ಹೇಳಿದರು.
ಹುಬ್ಬಳ್ಳಿ- ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಜಿಎಸ್ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೈಸರ್ಗಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ಪರಿಸರವನ್ನು ರಕ್ಷಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ. ಪಟಾಕಿಗಳ ಹೆಚ್ಚಿನ ಬಳಕೆಯಿಂದ ಶಬ್ದ ಮಾಲಿನ್ಯ ಸಹ ಹೆಚ್ಚಾಗಿ ದುಷ್ಪರಿಣಾಮ ಆಗುತ್ತಿವೆ ಎಂದು ಹೇಳಿದರು.
ಸುಳ್ಳ ಮಠದ ರಮಾನಂದ ಸ್ವಾಮೀಜಿ, ದೇವರು ಸೃಷ್ಟಿಸಿದ ಪ್ರಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಪರಿಸರದ ಪ್ರತಿಯೊಂದು ಜೀವಿ ಪರೋಪಕಾರಿ ಗುಣ ಹೊಂದಿದೆ. ಹೀಗಿರುವಾಗ ನಾವು ಪರಿಸರವನ್ನು ಹಾಳು ಮಾಡದೆ ಅದನ್ನು ರಕ್ಷಿಸಬೇಕೆಂದರು. ಸ್ಕೋಪ್ ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಭಟ್ಟ ಮಾತನಾಡಿ, ಮಕ್ಕಳು ಪಟಾಕಿ ಹಾರಿಸುವುದರಿಂದ ಅನೇಕ ತೊಂದರೆಗಳಿಗೆ ಸಿಲುಕುತ್ತಾರೆ. ಪರಿಸರ ನಾಶವೂ ಆಗುತ್ತದೆ. ಆದ್ದರಿಂದ ಸಿಡಿಮದ್ದುಗಳ ಬಳಕೆಯನ್ನು ಕಡಿಮೆ ಮಾಡಲು ವಿನಂತಿಸಿದರು.
ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಸ್ನೇಹಿ ಗಣಪ ಕಲಾವಿದ ಮಂಜುನಾಥ ಹಿರೇಮಠ ಪ್ರಾತ್ಯಕ್ಷಿಕೆ ನೀಡಿದರು. ಸಭೆಯಲ್ಲಿ ಡಾ.ಎ.ಎಸ್. ಬಾಲಸುಬ್ರಹ್ಮಣ್ಯ, ಪಂಡಿತ ಮುಂಜಿ ಹಾಗೂ ಬಿಜಿಎಸ್ ಶಿಕ್ಷಣ ಸಂಸ್ಥೆಯ ಧನಂಜಯ ಇದ್ದರು.
ಚೈತ್ರಾ ಕಾಮಣ್ಣನವರ ಸ್ವಾಗತಿಸಿದರು, ಸೋನು ಪ್ರಿಯಾ ವಂದಿಸಿದರು, ಅನುಷಾ ಸತ್ಯಣ್ಣನವರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

